ಬುಧವಾರ, ಜನವರಿ 22, 2020
25 °C

ಶಿವಮೊಗ್ಗಕ್ಕೆ ನಾಳೆ ಮಹಾಶ್ರಮಣ್ ಜೀ ಭೇಟಿ: ಪ್ರವಚನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಆಚಾರ್ಯ ಮಹಾಶ್ರಮಣ್ ಜೀ ಅವರು ಸಾಧು-ಸಾದ್ವಿಯರ ಜತೆ ಹಮ್ಮಿಕೊಂಡಿರುವ ಅಹಿಂಸಾ ಯಾತ್ರೆ ಡಿ.16ರಂದು ಶಿವಮೊಗ್ಗಕ್ಕೆ ಬರುತ್ತಿದೆ. ಅಂದು ಪ್ರವಚನ ಇರುತ್ತದೆ.

ಮಹಾಶ್ರಮಣ್ ಜೀ ಅವರು ಅಹಿಂಸೆಯ ಯಾತ್ರೆಯನ್ನು 2014ರ ನವೆಂಬರ್ 9ರಂದು ದೆಹಲಿಯ ಕೆಂಪುಕೋಟೆಯಿಂದ ಆರಂಭಿಸಿದ್ದರು. ಪಾದಯಾತ್ರೆ ಮೂಲಕ ಅವರು ಮೂರು ದೇಶ ಮತ್ತು ಭಾರತದ 20 ರಾಜ್ಯಗಳಲ್ಲಿ 15 ಸಾವಿರ ಕಿ.ಮೀ.ಪ್ರಯಾಣ ಮಾಡಿದ್ದಾರೆ. 
ಸದ್ಭಾವನೆಯ ಪ್ರಸಾರ, ನೈತಿಕತೆಯ ಪ್ರಚಾರ-ಪ್ರಸಾರ, ವ್ಯಸನ ಮುಕ್ತಿಯ ಅಭಿಯಾನ ಈ ಯಾತ್ರೆಯ ಮುಖ್ಯ ಉದ್ದೇಶ ಎಂದು ಶ್ರೀಜೈನ್ ಶ್ವೇತಾಂಬರ್ ತೇರಾಪಂಥ್ ಸಭಾ ಅಧ್ಯಕ್ಷ ಮದನ ರಾಜ್ ಸಂಚೇತಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.16ರಂದು ಬೆಳಿಗ್ಗೆ 9.30ಕ್ಕೆ ಭದ್ರಾವತಿಯಿಂದ ಬರುವ ಯಾತ್ರೆಗೆ ಹೊಳೆ ಬಸ್‌ಲ್ದಾಣದ ಬಳಿ ಸ್ವಾಗತ ಕೋರಲಾಗುವುದು. ನಂತರ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಎನ್ಇಎಸ್ ಮೈದಾನಕ್ಕೆ ಕರೆ ತರಲಾಗುವುದು. 10.30ಕ್ಕೆ ಪ್ರವಚನ.  ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೇಮಿಚಂದ್, ದಿನೇಶ್‌ಕುಮಾರ್, ವಸಂತ್‌ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು