ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಉದ್ದಿಮೆಗಳಿಗೆ ಮಾರಕ ಬಜೆಟ್: ಕಾಂಗ್ರೆಸ್ ಟೀಕೆ

Last Updated 4 ಫೆಬ್ರುವರಿ 2020, 10:45 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಬಜೆಟ್‌ ಸಾರ್ವಜನಿಕ ಉದ್ದಿಮೆಗಳಿಗೆ ಮಾರಕವಾಗಿದೆಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ಆರೋಪಿಸಿದರು.

ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವ ಆಶ್ವಾಸನೆಗಳೂ ಬಜೆಟ್‌ ಒಳಗೊಂಡಿಲ್ಲ. ನಿರುದ್ಯೋಗಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ.ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿಲ್ಲ.ಇರುವ ಉದ್ಯೋಗಗಳನ್ನೂಕಸಿದುಕೊಳ್ಳಲಾಗಿದೆ. 11ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಾರ್ವಜನಿಕ ವಲಯದ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಖಾಸಗಿಯವರಿಗೆ ಷೇರು ಮಾರಾಟ ಮಾಡಲಾಗುತ್ತಿದೆ.ಭಾರತೀಯ ಜೀವವಿಮಾ ನಿಗಮ, ವಿಮಾನ ಯಾನ ಸಂಸ್ಥೆಗಳು ಸೇರಿ ದೊಡ್ಡದೊಡ್ಡ ಸಾರ್ವಜನಿಕ ಉದ್ಯಮ ಮುಚ್ಚಲು ಹೊರಟಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರಕ್ಕೂ ಹಿನ್ನಡೆಯಾಗಿದೆ.ತೆರಿಗೆ ವಿನಾಯಿತಿಯಲ್ಲಿಯೂ ಗೊಂದಲಗಳಿವೆ.ಸುಮಾರು 1.12 ಲಕ್ಷ ಕೋಟಿ ರು.ವಿತ್ತೀಯ ಕೊರತೆ ಉಂಟಾಗಿದೆ. ರಾಜ್ಯಕ್ಕೆ9.50 ಸಾವಿರ ಕೋಟಿ ರು.ನಷ್ಟವಾಗಿದೆ. ಕೇಂದ್ರದಿಂದ ತೆರಿಗೆ ಹಣದಲ್ಲಿ ಬರಬೇಕಾದ 30ಸಾವಿರ ಕೋಟಿಯೂಇಲ್ಲ.ನಿರೀಕ್ಷೆಯಂತೆ ಬಿಎಸ್ಎನ್ಎಲ್, ಸಿದ್ಧತೆ ನಡೆದಿದೆ.ಖಾಸಗಿ ಬಂಡವಾಳ ಶಾಹಿಗಳ ಕೈಗೆ ಜುಟ್ಟುಕೊಟ್ಟಿರುವ ಕೇಂದ್ರಸರ್ಕಾರ ಸಾರ್ವಜನಿಕ ಉದ್ಯಮಗಳನ್ನು ನಾಶಮಾಡುತ್ತಿದೆ ಎಂದು ಟೀಕಿಸಿದರು.

ದೇಶದ 16 ರಾಜ್ಯಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಇದೆ. ರೈತರ ಸಮಸ್ಯೆಗಳು ಬೆಟ್ಟದಷ್ಟಿವೆ. ಮಹಿಳೆಯರಸಬಲೀಕರಣಕ್ಕೆ ಒತ್ತು ನೀಡಿಲ್ಲ.ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್ ನೀಡುವ ಕೇಂದ್ರದ ಹುನ್ನಾರದ ಹಿಂದೆ ಅಂಬಾನಿ ಕಂಪನಿ ಹಿತಾಸಕ್ತಿ ಇದೆ ಎಂದು ಛೇಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ವಿಶ್ವನಾಥ್ ಕಾಶಿ, ಮುಕ್ತಿಯಾರ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಶಮೀರ್ ಖಾನ್, ಚಂದ್ರಶೇಖರ್, ಚಂದ್ರಭೂಪಾಲ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT