ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಜಿಲ್ಲೆಯಲ್ಲಿ 19 ನಿರ್ಬಂಧಿತ ಪ್ರದೇಶಗಳು

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ವಿವರಣೆ
Last Updated 5 ಜೂನ್ 2020, 20:00 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಗೆ ಹೊರರಾಜ್ಯಗಳಿಂದ ಬಂದಿರುವವರಲ್ಲಿ ಹಾಗೂ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದ ಪ್ರದೇಶಗಳ ಸಂಪರ್ಕಕ್ಕೆ ಬಂದಿರುವವರಲ್ಲಿಯೇ ಕೋವಿಡ್‌ ದೃಢವಾಗಿರುವ ಪ್ರಕರಣಗಳು ಕಂಡು ಬಂದಿವೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ 4 ರಂದು 88 ಜನರಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 356 ಕ್ಕೆ ತಲುಪಿದೆ. ಇದುವರೆಗೂ ಒಟ್ಟು 19 ನಿರ್ಬಂಧಿತ ಪ್ರದೇಶಗಳನ್ನು (ಕಂಟೊನ್ಮೆಂಟ್‌ ಜೋನ್‌) ಮಾಡಲಾಗಿದೆ. ಬೆಂಗಳೂರು, ಆಂಧ್ರಪ್ರದೇಶಗಳಿಂದ ಬಂದಿರುವವರಲ್ಲಿ ಸೋಂಕಿತರು ಬೆರಳೆಣಿಕೆಯಷ್ಟಿದ್ದಾರೆ. ಆದರೆ ಬಹುತೇಕ ಮಹಾರಾಷ್ಟ್ರದಿಂದ ಬಂದಿರುವವರಲ್ಲಿಯೇ ಕೋವಿಡ್‌ ಪತ್ತೆಯಾಗಿದೆ. 88 ಪ್ರಕರಣಗಳ ಪೈಕಿ ಪ್ರಕರಣ ಸಂಖ್ಯೆ 2612 ಸಂಪರ್ಕದಿಂದ 30 ಜನರಿಗೆ ಕೋವಿಡ್‌ ತಗುಲಿದೆ ಎನ್ನುವುದು ರಾಜ್ಯಮಟ್ಟದ ವರದಿಯಲ್ಲಿ ತಪ್ಪಾಗಿ ಬಂದಿದ್ದು, ಅದನ್ನು ಸರಿಪಡಿಸಲಾಗಿದೆ. ಅವರೆಲ್ಲರೂ ಮಹಾರಾಷ್ಟ್ರದಿಂದ ಹಿಂತಿರುಗಿದವರಾಗಿದ್ದಾರೆ ಎಂದರು.

ರಾಯಚೂರಿನ ಪಶ್ಚಿಮ ಠಾಣೆಯ ಮೂರು ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಗೋಲ್ ಮಾರ್ಕೆಟ್, ಪೋಸ್ಟ್ ಮ್ಯಾನ್‌ಗೆ ಸೋಂಕು ಕಂಡಿದ್ದರಿಂದ ರಾಂಪೂರಿನಲ್ಲಿ ಮತ್ತು ಅಶಾಕಾರ್ಯಕತೆಯಲ್ಲಿ ಸೊಂಕು ಕಂಡಿದ್ದರಿಂದ ಅಸ್ಕಿಹಾಳ ಗ್ರಾಮಗಳಲ್ಲಿ ಕಟ್ಮೊಂನೇಟ್ ಪ್ರದೇಶಗಳನ್ನು ಈಗ ರಚಿಸಲಾಗಿದೆ ಎಂದರು.

ಕೃಷಿ ವಿಶ್ವವಿದ್ಯಾಲಯ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಠಾಣೆಯ ಮೂರು ಜನ ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ಅದೇ ರೀತಿ ರಾಂಪೂರು ಪೋಸ್ಟ್ ಮ್ಯಾನ್ ಸಹ ಅದೇ ವ್ಯಾಪ್ತಿಯಲ್ಲಿರುವುದರಿಂದ ಸೋಂಕು ಬಂದಿದೆ. ಅಸ್ಕಿಹಾಳ ಅಶಾ ಕಾರ್ಯಕರ್ತೆಯ ಸಹೋದರ ಬೆಂಗಳೂರಿನಿಂದ ಬಂದಿದ್ದು ಪ್ರಥಮ ಸಂಪರ್ಕ ಹೊಂದಿದ್ದರಿಂದ ಸೋಂಕು ಪತ್ತೆಯಾಗಿದೆ. ಇನ್ನುಳಿದ ನಾಲ್ಕು ಪ್ರಕರಣಗಳು ಕ್ವಾರಂಟೈನ್ ಕೇಂದ್ರದಲ್ಲಿರಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದರು.

ಸಿರವಾರದ ಗುಡಿದಿನ್ನಿ ವ್ಯಕ್ತಿಯಲ್ಲಿ ಎಸ್‌ಎಆರ್‌ಐ, ಅಸ್ತಮ ಇರುವುದರಿಂದ ಸೋಂಕು ಪತ್ತೆಯಾಗಿದೆ. ಮಾನ್ವಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಹೈದರಾಬಾದ್‌ನಿಂದ ಬಂದಿದ್ದು ಸೋಂಕು ಕಂಡಿದೆ. ಗುಡಿದಿನ್ನಿ, ಲಿಂಗಸೂಗೂರು ತಾಲ್ಲೂಕಿನ ಕರಡಕಲ್, ಹಟ್ಟಿ ಕಂಟ್ನೋನೆಂಟ್ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದರು.

ದೇವದುರ್ಗ ತಾಲ್ಲೂಕಿನ ಮ್ಯಾಕಲದೊಡ್ಡಿ, ಕಕ್ಕಲದೊಡ್ಡಿ, ಪರಾಪುರು, ಜಾಲಹಳ್ಳಿ ಮತ್ತು ದೇವದುರ್ಗ ಪಟ್ಟಣಗಳಲ್ಲಿ ಕಂಟೋನ್ಮೇಟ್ ಕೇಂದ್ರಗಳಾಗಿಸಲಾಗಿದೆ. ಮಸ್ಕಿಯಲ್ಲಿ ನಾಲ್ಕು ಕಂಟ್ನೋನ್ಮೆಂಟ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಸ್ಕಿ ಪಟ್ಟಣದಲ್ಲಿ ಮೂರು ಮತ್ತು ಜೋಳದರಾಶಿ ಗ್ರಾಮದಲ್ಲಿ ಎಚ್ಚರವಹಿಸಲಾಗಿದೆ. ಲಿಂಗಸೂಗೂರು ತಾಲ್ಲೂಕಿನ ಸರ್ಜಾಪುರ, ಹಟ್ಟಿ ಮತ್ತು ಲಿಂಗಸಗೂರುಗಳಲ್ಲಿ ಕಂಟೋನ್ಮೇಟ್ ಕೇಂದ್ರಗಳನ್ನಾಗಿ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ಜೂನ್‌ 4 ರವರೆಗೂ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿದ್ದ 11,066 ಜನರಲ್ಲಿ 9,885 ಜನರನ್ನು ಬಿಡುಗಡೆಗೊಳಿಸಲಾಗಿದೆ. 1,238 ಜನರು ಇನ್ನೂ ಕೇಂದ್ರಗಳಿದ್ದು ಪರೀಕ್ಷೆ ನಡೆಸಿ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಬಿಡುಗಡೆಗೊಳಿಸಲಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುವ ಆರ್‌ಟಿ-ಪಿಸಿಎರ್ ಪರೀಕಾ ಕೇಂದ್ರದಲ್ಲಿ 932 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 119 ಪ್ರಕರಣಗಳ ಫಲಿತಾಂಶ ಲಭಿಸಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಹೆ‌ಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಸಹಾಯಕ ಆಯುಕ್ತ ಸಂತೋಷ ಕಾಮನಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ, ಡಾ.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT