ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಿಷಪೂರಿತ ಆಹಾರ‌ ಸೇವಿಸಿ ಇಬ್ಬರು‌ ಮಕ್ಕಳ ಸಾವು

Published 28 ಏಪ್ರಿಲ್ 2024, 7:39 IST
Last Updated 28 ಏಪ್ರಿಲ್ 2024, 7:39 IST
ಅಕ್ಷರ ಗಾತ್ರ

ಶಕ್ತಿನಗರ/ ರಾಯಚೂರು: ರಾಯಚೂರು ತಾಲ್ಲೂಕಿನ‌ ವಡ್ಲೂರು ಕ್ರಾಸ್ ಬಳಿಯ ಚಿಕ್ಕಸೂಗೂರು ವ್ಯಾಪ್ತಿಯಲ್ಲಿ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ. ಮೂವರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರತಿ (7) ಮತ್ತು ಪ್ರಿಯಾಂಕ (9) ಮೃತಪಟ್ಟ ಮಕ್ಕಳು. ಹುಸೇನಮ್ಮ (35) , ಮಾರುತಿ (60) ಮತ್ತು ಲಕ್ಷಣ (60) ಅಸ್ವಸ್ಥಗೊಂಡು ನಗರದ ರಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಲಿಂಗಸೂಗೂರು ತಾಲ್ಲೂಕಿನ ಕಮಲದಿನ್ನಿ ಗ್ರಾಮದವರಾದ ಇವರು ರಾಯಚೂರು ತಾಲ್ಲೂಕಿನ ವಡ್ಲೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಬಂದಿದ್ದರು. ಶಾಲೆಗೆ ರಜೆ ಇರುವ ಕಾರಣ ನಿಮಿತ್ತ ಮಕ್ಕಳು ಪೋಷಕರ ಬಳಿ ಇದ್ದರು.

ರಾತ್ರಿ ಊಟ ಸಮಯದಲ್ಲಿ ಚಪಾತಿ , ಹೆಸರಕಾಳು, ಅನ್ನ ಸಾಂಬರು ಸೇವಿಸಿದ್ದ ಮಕ್ಕಳು ಸೇರಿ ಕುಟುಂಬಸ್ಥರು ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ.

ಕೂಡಲೇ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ರಾಯಚೂರಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT