ಗುರುವಾರ , ಏಪ್ರಿಲ್ 15, 2021
20 °C

ರಾಯಚೂರು ಕ್ಷೇತ್ರ: 40,120 ಯುವ ಮತದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಲೋಕಸಭಾ ಚುನಾವಣೆಗೆ ರಾಯಚೂರು ಕ್ಷೇತ್ರದಲ್ಲಿ 18 ರಿಂದ 19 ವರ್ಷ ತುಂಬಿದ 40,120 ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಮೊದಲ ಬಾರಿಗೆ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ.

ಸುರಪುರ 4,347, ಶಹಾಪೂರದಲ್ಲಿ 4,958, ಯಾದಗಿರಿಯಲ್ಲಿ 5,052, ರಾಯಚೂರು ಗ್ರಾಮೀಣದಲ್ಲಿ 5,725, ರಾಯಚೂರು ನಗರದಲ್ಲಿ 5,711, ಮಾನ್ವಿಯಲ್ಲಿ 5,040, ದೇವದುರ್ಗದಲ್ಲಿ 4,477 ಮತ್ತು ಲಿಂಗಸೂಗೂರಲ್ಲಿ 4,810 ಸೇರಿ ಒಟ್ಟು 40,120 ಯುವ ಮತದಾರರಿದ್ದಾರೆ.

117 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಪುರ, ಶಹಾಪೂರ ಹಾಗೂ ಯಾದಗಿರಿಯಲ್ಲಿ ತಲಾ 15, ರಾಯಚೂರು ಗ್ರಾಮೀಣದಲ್ಲಿ 2, ರಾಯಚೂರು ನಗರದಲ್ಲಿ 28, ಮಾನ್ವಿಯಲ್ಲಿ 16, ದೇವದುರ್ಗದಲ್ಲಿ 11 ಮತ್ತು ಲಿಂಗಸೂಗೂರು 15 ಮತಗಟ್ಟೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ವಿಶೇಷ ಚೇತನರಿಗೆ ವಾಹನ ವ್ಯವಸ್ಥೆ

ಲೋಕಸಭಾ ಚುನಾವಣೆಗೆ ವಿಶೇಷಚೇತನರು ಹಾಗೂ ಅಂಧರು ಮತದಾನದಲ್ಲಿ ಭಾಗವಹಿಸಲು ವಿಧಾನಸಭಾವಾರು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6ಗಂಟೆವರೆಗೆ ವಿಶೇಷ ಚೇತನರು ಮತದಾನ ಮಾಡಲು ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಸುರಪುರದಲ್ಲಿ 110, ಶಹಾಪೂರ 89, ಯಾದಗಿರಿ 110, ರಾಯಚೂರು ಗ್ರಾಮೀಣ 201, ರಾಯಚೂರು ನಗರ 165, ಮಾನ್ವಿ 215, ದೇವದುರ್ಗ 230 ಮತ್ತು ಲಿಂಗಸುಗೂರದಲ್ಲಿ 221 ವಾಹನ ಸೇರಿ ಒಟ್ಟು 1,341 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾದಗಿರಿ ಹೊಸ ಬಸ್ ನಿಲ್ದಾಣ ಹತ್ತಿರದ ಚಿರಂಜಿವಿ ಪ್ರೌಢಶಾಲೆ, ರಾಯಚೂರಿನ ಉಟ್ಕೂರು ಲಕ್ಷ್ಮಯ್ಯ ಫಾರ್ಮಸಿ ಕಾಲೇಜು ಮತ್ತು ಲಿಂಗಸೂಗೂರಿನ ಸುನಗರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರಿಗಾಗಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದ 1,630 ಅಂಧ ಮತದಾರರಿದ್ದಾರೆ. ಸುರಪುರದಲ್ಲಿ 94, ಶಹಾಪುರದಲ್ಲಿ 92, ಯಾದಗಿರಿ 86, ರಾಯಚೂರು ಗ್ರಾಮೀಣ 259, ರಾಯಚೂರು ನಗರ 289, ಮಾನ್ವಿ 375, ದೇವದುರ್ಗ 164 ಮತ್ತು ಲಿಂಗಸೂಗೂರಿನಲ್ಲಿ 271 ಅಂಧ ಮತದಾರರಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು