ಬುಧವಾರ, ಆಗಸ್ಟ್ 5, 2020
26 °C

ಜಿಲ್ಲೆಯಲ್ಲಿ 41 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಮತ್ತೆ 41 ಜನರಿಗೆ ಕೋವಿಡ್‌ ದೃಢವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 131 ರಷ್ಟಾಗಿದೆ.

ಕೋವಿಡ್‌ನಿಂದ ಗುಣಮುಖರಾದ 18 ಜನರನ್ನು ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಮಾಡಲಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 422 ಕ್ಕೆ ಏರಿಕೆಯಾಗಿದೆ. ಕೋವಿಡ್ ಶಂಕೆಯಿಂದ ಶನಿವಾರ ಜಿಲ್ಲೆಯಾದ್ಯಂತ ಒಟ್ಟು 326 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಒಟ್ಟು 1,742 ಮಾದರಿಗಳ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ 29 ಜನರು, ಸೋಂಕಿತರೊಂದಿಗೆ ಸಂಪರ್ಕ ಇದ್ದ ಕಾರಣದಿಂದ ಬಂದಿದೆ. ಮೂವರು ತೆಲಂಗಾಣದಿಂದ ಬಂದಿದ್ದು, ಇಬ್ಬರು ಬೆಂಗಳೂರಿನಿಂದ ಬಂದವರು, ಒಬ್ಬರು ಸೌದಿ ಅರೇಬಿಯಾದಿಂದ ಹಿಂತಿರುಗಿದವರು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಇಬ್ಬರಿಗೆ ಕೊರೊನಾ ದೃಢವಾಗಿದೆ.

ಸಿಂಧನೂರಿನಲ್ಲಿ 17 ಜನರಿಗೆ ಕೋವಿಡ್‌

ಸಿಂಧನೂರು: ತಾಲ್ಲೂಕಿನಲ್ಲಿ ಶನಿವಾರ ಕೊರೊನಾ ವೈರಸ್ ಸ್ಪೋಟಗೊಂಡಿದ್ದು, 17 ಜನರಿಗೆ ಸೋಂಕು ದೃಢಪಟ್ಟಿದೆ.

ನಗರದ ಅಮರಪದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಬಟ್ಟೆ ಖರೀದಿಸಿದ ನಗರದ ಪಟೇಲವಾಡಿ, ಪೊಲೀಸ್ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಮಹಿಬೂಬ ಕಾಲೋನಿ ಮತ್ತು ಮಾನ್ವಿ ತಾಲ್ಲೂಕಿನ ಉಮಳಿ ಹೊಸೂರ ಗ್ರಾಮ ಸೇರಿ ಒಟ್ಟು 14 ಜನರಿಗೆ ಹಾಗೂ ತೆಲಂಗಾಣದ ನಂಟು ಹೊಂದಿರುವ ಗಾಂಧಿನಗರದ ಒಬ್ಬರಿಗೆ, ನಗರದ ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅವರ ಟ್ರಾವೆಲ್ ಹಿಸ್ಟರಿಯನ್ನು ಸಂಗ್ರಹಿಸಲಾಗುತ್ತಿದ್ದು, ಸೋಂಕಿತರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲಾ ಕಾಲೋನಿ ಹಾಗೂ ವಾರ್ಡ್‍ಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು