ರಾಯಚೂರು: ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಗುರುವಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ತಗಡಿನ ಶೆಡ್ನಿಂದ ನಿರ್ಮಿಸಿದ್ದ ಮನೆ ಧ್ವಂಸವಾಗಿದೆ. ಶೆಡ್ನಲ್ಲಿದ್ದ ಐದು ಕುರಿಗಳು ಸಜೀವ ದಹನವಾಗಿವೆ.

ಏಗನೂರು ಗ್ರಾಮದ ನರಸಿಂಹಲು ಅವರ ಶೆಡ್ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

ಮನೆಯಲ್ಲಿದ್ದ ₹40 ಸಾವಿರ ನಗದು, 5 ಗ್ರಾಂ ಚಿನ್ನ ಕಿವಿಯೋಲೆ, ಬೆಳ್ಳಿಯ ಕಾಲಿನ ಗೆಜ್ಜೆಸರ ಹಾಗೂ ದವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ. ಶೆಡ್ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಪತಿ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿ ಹೊತ್ತಿಕೊಂಡ ಬಳಿಕ ಗ್ರಾಮಸ್ಥರು ಕೊಡ ಹಾಗೂ ಬಕೆಟ್ಗಳಿಂದ ನೀರು ಹಾಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಿಸಿಲಿನ ಝಳಕ್ಕೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.