ಶನಿವಾರ, ಸೆಪ್ಟೆಂಬರ್ 25, 2021
22 °C

ಎಸಿಬಿ ದಾಳಿ: ಪುರಸಭೆ ಸಿಬ್ಬಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದಗಲ್: ಪಟ್ಟಣದ ಪುರಸಭೆಯ ವಾಲ್‌ಮ್ಯಾನ್‌ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರನ್ನು ಬಂಧಿಸಲಾಗಿದೆ.

ಪುರಸಭೆ ಸಿಬ್ಬಂದಿಗೆ ಮಂಜೂರಾದ ವಸತಿ ಯೋಜನೆಯ ಮನೆ ನಿರ್ಮಾಣದ ಹಣ ಬಿಡುಗಡೆ ಮಾಡಲು ಪೌರ ಕಾರ್ಮಿಕರಾದ ಬಸಮ್ಮ ಎಂಬವರಿಂದ ₹25 ಸಾವಿರ ಲಂಚ ಕೇಳಿದ್ದರು. ಬಸಮ್ಮ ಅವರ ಮಗ ರಮೇಶ ಎಸಿಬಿಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಎಸಿಬಿ ಎಸ್ಪಿ ಗುರುನಾಥ ಮಟ್ಟೂರು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವಕುಮಾರ, ಪಿ.ಎಸ್.ಐ ಪ್ರದೀಪ ತಳ್ಳಿಕೇರಿ, ವೀರಣ್ಣ ಹಳ್ಳಿ, ಕಾನ್‌ಸ್ಟೆಬಲ್‌ ವಿಕ್ರಮ ಸಿಂಹರೆಡ್ಡಿ, ರಾಜಪ್ಪ, ವಿನೋದರಾಮ, ಮುರಳಿ, ಬಸವರಾಜೇಶ್ವರಿ, ನಾಗರಾಜ, ಬಸವರಾಜ ಅವರ ನೇತೃತ್ವದ ತಂಡ ದಾಳಿ ಮಾಡಿ ವೆಂಕಟೇಶ ಅವರನ್ನು ಬಂಧಿಸಿದೆ ಎಂದು ಎಸಿಬಿ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು