ಸಿಂಧನೂರು: ತಾಲ್ಲೂಕಿನ ಅಂಬಾಮಠದ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪ ನಿರ್ಮಾಣ ಕಾರ್ಯಕ್ಕಾಗಿ ತುಮಕೂರು ಜಿಲ್ಲೆಯಿಂದ ಮೂರು ಲಾರಿಯಲ್ಲಿ ತರಲಾಗಿದ್ದ ಕೆತ್ತನೆಯಾಗಿರುವ ಶಿಲೆಗಳನ್ನು ಸ್ವಾಗತಿಸಿಕೊಂಡು ದೇವಸ್ಥಾನದ ಅರ್ಚಕರು ಹಾಗೂ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಬಗಳಾಮುಖಿ ದೇವಿಯ ದರ್ಶನ ಪಡೆದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಮುಂಬರುವ ಜಾತ್ರೆ ಬರುವಷ್ಟರಲ್ಲಿ ಗರ್ಭಗುಡಿ ನಿರ್ಮಿಸಬೇಕು ಹಾಗೂ ಭಕ್ತರಿಗೆ ವಸತಿಯಾಗಿ ಯಾತ್ರಾ ನಿವಾಸ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿಗೆ ತಿಳಿಸಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿ, ‘ಗರ್ಭಗುಡಿ, ಮುಖಮಂಟಪ, ಸುಖಾಸಿನಾ, ಉಪಪೀಠ ಹಾಗೂ ಆದಿಪ್ರಸ್ತಾನ ನಿರ್ಮಾಣಕ್ಕಾಗಿ ತುಮಕೂರು ಜಿಲ್ಲೆಯ ಶಿರಾದಿಂದ ಮೂರು ಲಾರಿಯಲ್ಲಿ ಕೆತ್ತನೆಯಾದ ಶಿಲೆಗಳನ್ನು ತರಲಾಗಿದ್ದು, ಅಂಬಾಮಠ ಜಾತ್ರೆ ಬರುವವೊತ್ತಿಗೆ ಈ ಕೆಲಸಗಳನ್ನು ಪೂರ್ಣಗೊಳಿಸಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು’ ಎಂದು ಹೇಳಿದರು.

ವೆಂಕಟಗಿರಿ ಕ್ಯಾಂಪಿನ ಸಿದ್ಧಾಶ್ರಮದ ಸದಾನಂದ ಶರಣರು, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಅಂಬಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಂಗನಗೌಡ ಗೊರೇಬಾಳ, ಕಾರ್ಯದರ್ಶಿ ಹನುಮೇಶ ಆಚಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಜಿ.ಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ವೀರೋಜಿರಾವ್ ಮರಾಠ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.