ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಗೃಹ ರಕ್ಷಕದಳಕ್ಕೆ ಅರ್ಜಿ ಆಹ್ವಾನ

Published 26 ಫೆಬ್ರುವರಿ 2024, 14:29 IST
Last Updated 26 ಫೆಬ್ರುವರಿ 2024, 14:29 IST
ಅಕ್ಷರ ಗಾತ್ರ

ರಾಯಚೂರು: ಗೃಹ ರಕ್ಷಕ ದಳದ ರಾಯಚೂರು ನಗರ ಘಟಕ ಹಾಗೂ ಮಾನ್ವಿ, ಸಿರವಾರ ಸೇರಿ ಒಟ್ಟು 99 ತಾಲ್ಲೂಕು ಹಾಗೂ ಉಪ ಘಟಕಗಳಲ್ಲಿ ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ರಾಯಚೂರು ನಗರ ಘಟಕದಲ್ಲಿ 26 (ಮಹಿಳಾ–14, ಪುರುಷ–12), ಮಾನ್ವಿ 11, ಸಿಂಧನೂರು 18, ಲಿಂಗಸುಗೂರು 5, ದೇವದುರ್ಗ 3, ಹಟ್ಟಿ 21, ಮಸ್ಕಿ 03, ಕವಿತಾಳ 6, ಸಿರವಾರ 1, ಶಕ್ತಿನಗರ 4, ಮುದಗಲ್ 1 ಸೇರಿ ಒಟ್ಟು 99 ತಾಲ್ಲೂಕು ಹಾಗೂ ಉಪ ಘಟಕಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 19 ರಿಂದ 50 ವರ್ಷ ವಯಸ್ಸಿನ,  10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಫೆಬ್ರುವರಿ 27ರಿಂದ ಮಾರ್ಚ್ 2ರೊಳಗೆ ಅಗತ್ಯ  ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಗರದ ಪ್ರಥಮ ದರ್ಜೆ ಕಾಲೇಜು ಬಳಿಯ ಜಿಲ್ಲಾ ಸಮಾದೇಷ್ಟರ ಕಚೇರಿಗೆ ಭೇಟಿ ನೀಡಬಹುದು.

ದೂರವಾಣಿ ಸಂಖ್ಯೆ 08532-221679, ಮಾನ್ವಿ-99801 63642, ಸಿಂಧನೂರು-87226 77195, ಮಸ್ಕಿ-99457 39687, ಲಿಂಗಸುಗೂರು-ಮುದಗಲ್- 99454 77467, ಹಟ್ಟಿ-99801 63642, ದೇವದುರ್ಗ-96869 92060, ಸಿರವಾರ-ಕವಿತಾಳ- 79964 07576, ಶಕ್ತಿನಗರ-97413 33086 ಗೆ ಸಂಪರ್ಕಿಸಬಹುದು ಎಂದು ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT