ಲಿಂಗಸುಗೂರು: ‘ಸಹಕಾರ ಸಂಘಕ್ಕೆ ಗ್ರಾಹಕರೇ ಜೀವಾಳ. ಹೀಗಾಗಿ ಸಹಕಾರ ಸಂಘದ ಸಿಬ್ಬಂದಿ ಗ್ರಾಹಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಆಗ ಸಂಘ ಪ್ರಗತಿ ಹೊಂದಲು ಸಾಧ್ಯ’ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಶಿವಬಸಪ್ಪ ಹೆಸರೂರು ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಬಣಜಿಗ ಪತ್ತಿನ ಸೌಹಾರ್ದ ಸಹಕಾರ ಸಂಘದ 20ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

‘ಬಣಜಿಗ ಸಮಾಜದ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಿದಾಗ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಅವುಗಳನ್ನು ಸರಿದೂಗಿಸಿಕೊಂಡು 20 ವರ್ಷ ಪೂರೈಸುವ ಮೂಲಕ ₹1 ಕೋಟಿ ಸಾಲ ನೀಡುವ ಮಟ್ಟಕ್ಕೆ ಸಂಘ ಬೆಳೆದಿದೆ. ಅದಕ್ಕೆಲ್ಲ ನಿರ್ದೇಶಕರು, ಸಿಬ್ಬಂದಿ ಮತ್ತು ಗ್ರಾಹಕರ ಸಹಕಾರವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಶಾಖೆ ಆರಂಭಿಸಿ ಚಿನ್ನದ ಮೇಲೆ ಸಾಲ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ಸಹಕಾರ ಸಂಘದ ಅಧ್ಯಕ್ಷ ಈಶ್ವರಪ್ಪ ಸಾಲ್ಮನಿ, ಉಪಾಧ್ಯಕ್ಷ ಲಿಂಗಶೆಟ್ಟೆಪ್ಪ ಅಂಗಡಿ, ಆರ್ಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಾಟೀಲ, ನಿರ್ದೇಶಕರಾದ ಮಲ್ಲಣ್ಣ ನರಕಲದಿನ್ನಿ, ಗಂಗಾಧರ ಐದನಾಳ, ಜಯಶ್ರೀ ಸಕ್ರಿ, ಶರಣಬಸವ ವಾರದ, ಅಭಿಷೇಕ ರಾಜಶೇಖರ, ಮಲ್ಲಿಕಾರ್ಜುನ ಪೇರಿ, ಶಿವಪ್ಪ ಸಕ್ರಿ, ಸಿದ್ರಾಮಪ್ಪ ಕಾಡ್ಲೂರ, ಲಕ್ಷ್ಮೀಪತಿ ವಕೀಲ, ಗುಂಡಯ್ಯ ಸೊಪ್ಪಿಮಠ, ಸರಳಾಕ್ಷ ಸಾಹುಕಾರ, ನಾಗರಾಜ ಯಲಿಗಾರ, ಶರಣಬಸವ, ಆದಪ್ಪ ಲೆಕ್ಕಿಹಾಳ, ಮಂಜುನಾಥ, ಯಮನೂರಿ, ಸುನೀಲ, ಅಮರೇಶ, ಕಾಳಪ್ಪ, ಸೋಮಶೇಖರ, ಸಿದ್ದಪ್ಪ, ಮಂಜುನಾಥ ಬ್ಯಾಗವಾಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.