ಹಳ್ಳದಲ್ಲಿ ಫೌಂಡೇಶನ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ಡಿಸೈನ್ ಮಾಡಿ ಅದಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದು ಅನುಮತಿ ಸಿಕ್ಕ ನಂತರ ಕೆಲಸ ಪ್ರಾರಂಭವಾಗಲಿದೆ.
ಹಂಪನಗೌಡ ಬಾದರ್ಲಿ, ಶಾಸಕ
ಮೂರ್ನಾಲ್ಕು ವರ್ಷಗಳಿಂದ ಬೊಮ್ಮನಾಳ ಸೇತುವೆ ನನೆಗುದಿಗೆ ಬಿದ್ದಿದ್ದು ಶಾಸಕ ಹಂಪನಗೌಡ ಬಾದರ್ಲಿ ಅವರು ಈ ಕುರಿತು ಗಮನ ಹರಿಸಬೇಕು.
ಬಸವರಾಜ ನಾಡಗೌಡ, ಅಧ್ಯಕ್ಷ ತಾಲ್ಲೂಕು ಘಟಕ ಜೆಡಿಎಸ್
ದೇವಿಕ್ಯಾಂಪಿನಲ್ಲಿ ಖಾಸಗಿ ಶಾಲೆಗೆ ನನ್ನ ಇಬ್ಬರು ಮಕ್ಕಳು ಹೋಗುತ್ತಿದ್ದಾರೆ. ಸೇತುವೆ ಕೊಚ್ಚಿ ಹೋಗಿ ಓಡಾಡಲು ದಾರಿ ಇಲ್ಲದಂತಾಗಿರುವುದರಿಂದ 4 ದಿನದಿಂದ ನನ್ನ ಮಕ್ಕಳು ಶಾಲೆಗೆ ಹೋಗಿಲ್ಲ.