ಶನಿವಾರ, ಅಕ್ಟೋಬರ್ 19, 2019
28 °C

ರಾಯಚೂರು: ಅದ್ಧೂರಿ ಜನಪದ ಉತ್ಸವ

Published:
Updated:
Prajavani

ರಾಯಚೂರು: ನವೋದಯ ಶಿಕ್ಷಣ ಸಂಸ್ಥೆಯ ಸೆಂಟ್ರಲ್ ಶಾಲೆಯಲ್ಲಿ ಜನಪದ ಉತ್ಸವ (ಕಾರ್ನಿವಲ್‌)ವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಲಾಯಿತು.

ಹಿಂದಿನ ಕಾಲದಲ್ಲಿ ಕಾಣುತ್ತಿದ್ದ ಮನೋರಂಜನಾ ಚಟುವಟಿಕೆಗಳು ಆಧುನಿಕ ಕಾಲದಲ್ಲಿ ಕಾಣದಂತಾಗಿವೆ. ಆದ್ದರಿಂದ ನವೋದಯ ಜನಪದ ಕಲಾ ಉತ್ಸವ ಕಾರ್ಯಕ್ರಮದ ಮೂಲಕ ಹಿಂದಿನ ಕಾಲವನ್ನು ನೆನಪಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ವಿದ್ಯಾರ್ಥಿಗಳು, ಪೋಷಕರು ಹಾಗೂ ಜನರ ಗಮನ ಸೆಳೆಯಿತು.

ಮಂಗನಾಟ, ದೊಂಬರಾಟ, ಹಾವಿನಾಟ, ಡೊಳ್ಳು ಕುಣಿತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿನೂತನವಾಗಿ ಉತ್ಸವ ಆಚರಿಸಲಾಯಿತು. ಡಿಜೆ ನೃತ್ಯವು ಸಂತೋಷವನ್ನು ಇಮ್ಮಡಿಗೊಳಿಸಿತು.

ಸಂಸ್ಥೆಯ ಅಧ್ಯಕ್ಷ ಎಸ್.ಆರ್.ರೆಡ್ಡಿ ಉದ್ಘಾಟಿಸಿದರು. ಅವರನ್ನು ಎತ್ತಿನ ಬಂಡಿಯಲ್ಲಿ ಉತ್ಸವದ ಸ್ಥಳದವರೆಗೆ ಕರೆತರಲಾಯಿತು.

ಸಂಸ್ಥೆಯ ಸದಸ್ಯರಾದ ಸ್ವಾತಿ ರೆಡ್ಡಿ, ನಂದಿಕಾ ರೆಡ್ಡಿ, ಅಮೃತ್ ರೆಡ್ಡಿ, ಕುಲಸಚಿವ ಟಿ.ಶ್ರೀನಿವಾಸ ಇದ್ದರು.

Post Comments (+)