ರಾಯಚೂರು: ಜಿಲ್ಲೆಯಲ್ಲಿ ಮತ್ತೆ 18 ಜನರಿಗೆ ಕೋವಿಡ್ ದೃಢವಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 403 ಕ್ಕೆ ಏರಿಕೆಯಾಗಿದೆ.

ರಾಯಚೂರು ನಗರದ 6 ವರ್ಷದ ಬಾಲಕಿಗೆ ಮತ್ತು ದೇವದುರ್ಗ ತಾಲ್ಲೂಕಿನ ನಾರಾಯಣ ತಾಂಡಾದ ಬಾಲಕಿಗೆ ಕೋವಿಡ್ ದೃಢವಾಗಿದೆ. 10 ಜನ ಪುರುಷರಿಗೆ ಹಾಗೂ ಆರು ಮಹಿಳೆಯರಿಗೆ ಕೋವಿಡ್ ತಗುಲಿದೆ. ಇವರಲ್ಲಿ 10 ಜನರು ಮಹಾರಾಷ್ಟ್ರದಿಂದ ಹಿಂತಿರುಗಿದವರು, ನಾಲ್ಕು ಜನರ ಸೋಂಕಿನ ಮೂಲ ಗೊತ್ತಾಗಿಲ್ಲ. ತೆಲಂಗಾಣದಿಂದ ಬಂದಿರುವ ಇಬ್ಬರಿಗೆ ಮತ್ತು ತಮಿಳುನಾಡಿನಿಂದ ಬಂದಿದ್ದ ಒಬ್ಬರಿಗೆ ಕೋವಿಡ್ ಪತ್ತೆಯಾಗಿದೆ.

440 ಸ್ಯಾಂಪಲ್ಗಳ ವರದಿ: ಜಿಲ್ಲೆಯಿಂದ ಇದೂವರೆಗೆ 18,274 ಜನರ ಗಂಟಲಿನ ದ್ರುವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 17,425 ವರದಿಗಳು ನೆಗೆಟಿವ್ ಆಗಿವೆ. ಇನ್ನುಳಿದ 440 ಸ್ಯಾಂಪಲ್ಗಳ ಫಲಿತಾಂಶ ಬರಬೇಕಿದೆ.

ಫಿವರ್ ಕ್ಲಿನಿಕ್ಗಳಲ್ಲಿಂದು 316 ಜನರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 266 ಜನರು ದಾಖಲಾಗಿದ್ದಾರೆ. ಇದುವರೆಗೂ ಸೋಂಕಿನಿಂದ ಗುಣಮುಖರಾದ 98 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.