ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಕೋವಿಡ್‌: ಮತ್ತೆ 88 ಪಾಸಿಟಿವ್‌

ಸೋಂಕಿತರೊಂದಿಗೆ ಸಂಪರ್ಕ ಇದ್ದವರಿಗೆ ಅತಿಹೆಚ್ಚು ಪತ್ತೆ
Last Updated 4 ಜೂನ್ 2020, 16:19 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಆರೋಗ್ಯ ಇಲಾಖೆಯಿಂದ ಗುರುವಾರ ಸಂಜೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಮತ್ತೆ 88 ಕೋವಿಡ್‌ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆಯು ಒಟ್ಟು 356 ಕ್ಕೆ ತಲುಪಿದೆ.

318 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಗುಣಮುಖರಾಗಿದ್ದ 36 ಸೋಂಕಿತರನ್ನು ಬಿಡುಗಡೆ ಮಾಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸಂಖ್ಯೆಗಳ ಏರುಗತಿಯಿಂದ ಜಿಲ್ಲೆಯಲ್ಲಿ ಭೀತಿ ಆವರಿಸಿದೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಹಾಗೂ ಹಾಸಿಗೆಗಳನ್ನು ಹೊಂದಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಓಪೆಕ್‌ ಆಸ್ಪತ್ರೆಯನ್ನು ಸೋಂಕಿತರಿಗಾಗಿ ಮೀಸಲಿಡಲಾಗಿದ್ದು, ಎಲ್ಲರನ್ನು ಅಲ್ಲಿಯೇ ದಾಖಲು ಮಾಡಲಾಗಿದೆ.

ಪ್ರಕರಣ ಸಂಖ್ಯೆ 2612 ಜೊತೆ ಸಂಪರ್ಕಕ್ಕೆ ಬಂದಿದ್ದ 30 ಜನರಿಗೂ ಕೋವಿಡ್‌ ದೃಢವಾಗಿದೆ. ಪ್ರಕರಣ ಸಂಖ್ಯೆ 2608 ಜೊತೆ ಸಂಪರ್ಕಕ್ಕೆ ಬಂದಿದ್ದ 17 ಜನರಿಗೂ ಸೋಂಕು ತಗುಲಿದೆ. ಪ್ರಕರಣ ಸಂಖ್ಯೆ 2939 ಜೊತೆ ಸಂಪರ್ಕದಲ್ಲಿದ್ದ 14 ಜನರಿಗೆ ಕೋವಿಡ್‌ ಬಂದಿದೆ. ಪ್ರಕರಣ ಸಂಖ್ಯೆ 2641 ಜೊತೆ ಸಂಪರ್ಕಕ್ಕೆ ಬಂದಿದ್ದ 9 ಜನರಿಗೆ ಕೊರೊನಾ ತಗುಲಿದೆ. ಪ್ರಕರಣ ಸಂಖ್ಯೆ 2936 ಸಂಪರ್ಕದಲ್ಲಿದ್ದ ಆರು ಜನರಿಗೆ ಕೋವಿಡ್‌ ಇದೆ.

ಒಟ್ಟು 76 ಜನರು ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದಕ್ಕಾಗಿ ಆಸ್ಪತ್ರೆಗೆ ದಾಖಲು ಆಗುವಂತಾಗಿದೆ. ತೆಲಂಗಾಣದಿಂದ ಬಂದಿದ್ದ ಒಬ್ಬರಿಗೆ, ಉಸಿರಾಟ ತೊಂದರೆ ಇದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮರಳಿದ್ದ 10 ಜನರಲ್ಲಿ ಕೋವಿಡ್‌ ಕಂಡು ಬಂದಿದೆ.

693 ವರದಿಗಳ ನಿರೀಕ್ಷೆ:ಜಿಲ್ಲೆಯಲ್ಲಿ ಗುರುವಾರ ಸಂಗ್ರಹಿಸಿರುವ 329 ಗಂಟಲು ದ್ರುವ ಮಾದರಿಗಳು ಸೇರಿ ಒಟ್ಟು 693 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 16,889 ಜನರ ಗಂಟಲು ದ್ರುವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವುಗಳ ಪೈಕಿ 15,505 ವರದಿಗಳು ಬಂದಿವೆ. 6 ಸ್ಯಾಂಪಲ್‌ಗಳು ತಿರಸ್ಕೃತವಾಗಿವೆ.

ಗುರುವಾರ ತಲುಪಿದ್ದ 364 ವರದಿಗಳ ಪೈಕಿ 88 ಪಾಸಿಟಿವ್‌ ಆಗಿವೆ. ಇನ್ನುಳಿದ ವರದಿಗಳೆಲ್ಲವೂ ಶುಕ್ರವಾರ ಬರಲಿವೆ. ಮುಂದಿನ ದಿನಗಳಲ್ಲಿ ಸ್ಯಾಂಪಲ್‌ಗಳನ್ನು ಕಳುಹಿಸಿದ ಮರುದಿನವೇ ಅವುಗಳ ವರದಿ ದೊರೆಯಲಿದೆ.

ಹೋಂ ಕ್ವಾರಂಟೈನ್‌:ಜಿಲ್ಲೆಯಲ್ಲಿ ಸದ್ಯ 183 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಸದ್ಯಕ್ಕೆ 1,456 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಅವುಗಳಲ್ಲಿ ರಾಯಚೂರು 191, ಸಿಂಧನೂರು 26, ಮಾನ್ವಿ 38, ದೇವದುರ್ಗ 865 ಜನರು ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ 306 ಜನರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT