ರಾಯಚೂರು: ಜಿಲ್ಲೆಗೆ 15 ಕೆಎಲ್ ಆಮ್ಲಜನಕ ಮತ್ತು 750 ರೆಮ್ಡಿಸಿವರ್ ಚುಚ್ಚುಮದ್ದು ಒದಗಿಸುವಂತೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಸೋಮವಾರ ಮುಖ್ಯಮಂತ್ರಿಯೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಯಚೂರು ನಗರದ ಸುರಾನಾ ಇಂಡಸ್ಟ್ರೀಸ್ನಲ್ಲಿರುವ 50 ಕೆಎಲ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪರಿಶೀಲಿಸುವಂತೆ ತಜ್ಞರ ತಂಡಕ್ಕೆ ತಿಳಿಸಲಾಗಿದೆ ಎಂದರು.

ಮಧುಮೇಹ, ಕ್ಯಾನ್ಸರ್, ಎಚ್ಐವಿ ಇದ್ದವರಿಗೆ ಕೋವಿಡ್ ಇಂಜಿಕ್ಷನ್ ನೀಡಿದರೆ ಬ್ಲಾಕ್ ಫಂಗಸ್ ಕಾಯಿಲೆ ಬರುತ್ತಿದೆ. ಇಂಥವರಿಗೆ ಚಿಕಿತ್ಸೆ ನೀಡಲು ₹ 3.5 ಲಕ್ಷದವರೆಗೂ ವೆಚ್ಚವಾಗುತ್ತದೆ. ಜಿಲ್ಲೆಯಲ್ಲಿ ನಾಲ್ಕು ಜನರಲ್ಲಿ ಇದು ಕಾಣಿಸಿಕೊಂಡಿದೆ. ಉಚಿತ ಚಿಕಿತ್ಸೆ ನೀಡಲು ನೆರವು ನೀಡಲು ಮುಖ್ಯಮಂತ್ರಿಗೆ ಕೋರಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.