ರಾಯಚೂರು: ಸಾರ್ವಜನಿಕರ ₹ 500 ಕೋಟಿಗೂ ಅಧಿಕ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ವೇಶ ಸಂಸ್ಥೆಯ ಪಾಲುದಾರರು ಹಾಗೂ ಏಜೆಂಟರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ವಜಾಗೊಳಿಸಿದೆ.
ದರ್ವೇಶ ಸಂಸ್ಥೆಯ ಪಾಲುದಾರರಾದ ಮಹ್ಮದ್ ಹುಸೇನ್ ಸುಜಾ, ಸೈಯದ್ ವಾಸಿಂ, ಸೈಯದ್ ಮಿಸ್ಕಿನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಹಾಗೂ ನ್ಯಾಯಾಂಗ ಬಂಧನಲ್ಲಿರುವ ದರ್ವೇಶ ಕಂಪನಿ ಏಜೆಂಟರಾದ ಅಜರ್ ಪಾಷಾ, ಸೈಯದ್ ಮೋಸಿನ್, ಶೇಖ್ ಮುಜಾಮಿಲ್ ಮತ್ತು ಬಾಬುಲ್ ಅಲಿಯಾಸ್ ಮಹ್ಮದ್ ಶಮೀದ್ ಅಲಿ ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ ವಜಾಗೊಳಿಸಿದ್ದಾರೆ.
ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಕಗೊಂಡಿರುವ ಮಸ್ಕಿ ನಾಗರಾಜ ವಾದ ಮಂಡಿಸಿದ್ದರು. ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಒಡಿ ಪ್ರಕರಣದ ತನಿಖೆ ನಡೆಸಿದೆ.