ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸ್ಥಿತಿಗತಿ ವೀಕ್ಷಿಸಿದ ಡಿಸಿ

ಜಿಲ್ಲೆಯಲ್ಲಿ ಮತ್ತೆ 17 ಜನರಿಗೆ ಕೋವಿಡ್‌ ದೃಢ
Last Updated 17 ಜುಲೈ 2020, 16:41 IST
ಅಕ್ಷರ ಗಾತ್ರ

ರಾಯಚೂರು: ಕೊರೊನಾ ಸೋಂಕು ತಡೆಗಾಗಿ ರಾಯಚೂರು ನಗರವನ್ನು ಲಾಕ್‌ಡೌನ್‌ ಮಾಡಿ ಮೂರನೇ ದಿನ ಶುಕ್ರವಾರ ಸ್ಥಿತಿಗತಿಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ನಗರದಾದ್ಯಂತ ಸಂಚರಿಸಿದರು.

ಜನ ಸಂಚಾರ, ವಾಹನಗಳ ಓಡಾಡುತ್ತಿರುವ ಬಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಕಲೆ ಹಾಕಿದರು.
ನಗರದ ಸ್ಟೇಷನ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ವಲ್ಲಭಬಾಯಿ ಪಟೇಲ್ ವೃತ್ತ, ಶೆಟ್ಟಿಬಾವಿವೃತ್ತ, ಸದರ್ ಬಜಾರ್‌ ಮತ್ತು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಅನಾವಶ್ಯಕವಾಗಿ ಬೈಕ್‌ಗಳ ಮೇಲೆ ತಿರುಗಾಡುವ ವಾಹನ ಸವಾರರ ವಿರುದ್ದ ಪ್ರಕರಣ ದಾಖಲಿಸಬೇಕು, ಮಾಸ್ಕ್ ಧರಿಸದೆ ಸಂಚರಿಸುವುದು ಕಂಡುಬಂದಲ್ಲಿ ದಂಡ ಹಾಕಿ, ವಾಹನ ವಶಪಡಿಸಿಕೊಳ್ಳಬೇಕು ಮತ್ತು ಸರಕು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಬಿಡಲು ಪೊಲೀಸರಿಗೆ ತಾಕೀತು ಮಾಡಿದರು.

ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಜನರು ಮನೆಯಿಂದ ಅನಾವಶ್ಯಕವಾಗಿ ಓಡಾಡುವುದನ್ನು ತಡೆಯಬೇಕು ಎಂದು ತಿಳಿಸಿದರು.

ಕೋವಿಡ್‌ ದೃಢ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 17 ಜನರಿಗೆ ಕೋವಿಡ್ ದೃಢವಾಗಿದ್ದು, ಇದರಿಂದಾಗಿ ಒಟ್ಟು 948 ಮಂದಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ. ಕೋವಿಡ್‌ನಿಂದ ಗುಣಮುಖವಾದ 8 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 544 ರಷ್ಟಾಗಿದೆ.

ಒಂದು ಸಾವು: ಕೋವಿಡ್‌ನಿಂದ ರೋಗಿ ಸಂಖ್ಯೆ ಪಿ-40096 ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಮಟ್ಟವರ ಸಂಖ್ಯೆ 13 ಕ್ಕೆ ತಲುಪಿದೆ.

ಮತ್ತೆ ಒಟ್ಟು 295 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಶುಕ್ರವಾರ ಬಂದ ವರದಿಗಳಲ್ಲಿ 1994 ನೆಗೆಟಿವ್ ವರದಿಗಳು ಬಂದಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ 30,563 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 28,113 ವರದಿಗಳು ನೆಗೆಟಿವ್ ಆಗಿವೆ. ಇನ್ನುಳಿದ 1,496 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.ಜಿಲ್ಲೆಯಲ್ಲಿ ಒಟ್ಟು 135 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ.

ಅನಗತ್ಯ ಸಂಚಾರಕ್ಕೆ ದಂಡ: ಲಾಕ್‌ಡೌನ್‌ ಇದ್ದರೂ ರಸ್ತೆಗಳ ಮೇಲೆ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ಬೈಕ್, ಕಾರು ಸೇರಿದಂತೆ ಒಟ್ಟು 827 ಪ್ರಕರಣಗಳನ್ನು ದಾಖಲಿಸಿ ಜಿಲ್ಲೆಯಾದ್ಯಂತ ₹70 ಸಾವಿರ ದಂಡ ವಿಧಿಸಲಾಗಿದೆ.

ಮಾಸ್ಕ್ ಧರಿಸದೆ ವಾಹನ ಚಲಾಯಿಸಿದವರ ವಿರುದ್ದ 335 ಪಕ್ರರಣ ದಾಖಲಿಸಿ, ₹16,600 ದಂಡ ಸಂಗ್ರಹಿಸಲಾಗಿದೆ. ಸಾರ್ವಜನಿಕರು ಆಟೋಗಳಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಒಂದು ವಾರ ಲಾಕ್‌ಡೌನ್ ಇರಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕುನಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT