ಸೋಮವಾರ, ಏಪ್ರಿಲ್ 12, 2021
25 °C

ಕಾಂಗ್ರೆಸ್ ಮಾಡಿದ ಅನ್ಯಾಯದ ಅರಿವಾಗಿದೆ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ‌ (ರಾಯಚೂರು): 'ಕಾಂಗ್ರೆಸ್ ಪಕ್ಷವು ದೀನದಲಿತರಿಗೆ ಮಾಡಿದ ಅನ್ಯಾಯದ ಅರಿವು ಈಗ ಆಗಿದೆ. ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಮುಕ್ತಗೊಳಿಸಬೇಕೆನ್ನುವ ಬಿಜೆಪಿ ಸಂಕಲ್ಪ ಈಡೇರುತ್ತಿದೆ' ಎಂದು ಉಪಮುಖ್ಯಮಂತ್ರಿ ಗೋವಿಂದ‌ ಕಾರಜೋಳ ಹೇಳಿದರು.

ಮಸ್ಕಿ‌ ಬಿಜೆಪಿ ಕಚೇರಿ ಆವರಣದಲ್ಲಿ‌ ಸೋಮವಾರ ನಡೆದ ಡಾ. ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

'ಪರಿಶಿಷ್ಟ ಜಾತಿಯವರು ಬೆಂಬಲಿಸಿದ್ದರಿಂದ ದೇಶದಲ್ಲಿ ಬಿಜೆಪಿ ಶಕ್ತಿ‌ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗಲಿದೆ' ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು