ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಿಕ್ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಒತ್ತಾಯ

Last Updated 24 ಫೆಬ್ರುವರಿ 2021, 13:38 IST
ಅಕ್ಷರ ಗಾತ್ರ

ರಾಯಚೂರು: ಖಾಟಿಕ್, ಕಟುಗ, ಸೂರ್ಯವಂಶ ಕ್ಷತ್ರಿಯ ಸಮಾಜದ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಸೂರ್ಯವಂಶ ಕ್ಷತ್ರಿಯ ಕಾಟಿಕ ಸಮಾಜದ ಮುಖಂಡರು ಬುಧವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅಸ್ಪೃಷ್ಯರಲ್ಲೇ ಅತಿಅಸ್ಪೃಷ್ಯರೆಂದು ಗುರುತಿಸಿಕೊಂಡಿದ್ದು ಖಾಟಿಕ, ಕಟುಕ, ಕಲಾಲ್, ಹಿಂದೂ ಕಲಾಲ್, ಶರೇಗಾರ, ಅರೆ ಕಸಾಯಿ, ಕಸಾಬ್, ಮರಟ್ಟಿ ಸಮನಾರ್ಥಕ ಪದಗಳಿಂದ ಗುರುತಿಸಿಕೊಂಡಿದೆ. ಕುರಿ, ಮೇಕೆ ಮಾಂಸ ಮಾರಾಟ ಮಾಡುವ ಕುಲಕಸುಬು ಮಾಡುತ್ತಿದ್ದು, ಕರ್ನಾಟಕ ಹೊರತುಪಡಿಸಿ ಮಹಾರಾಷ್ಟ್ರ, ಹರಿಯಾಣ, ಉತ್ತರಾಂಚಲ, ಹಿಮಾಚಲ, ಪಂಜಾಬ್, ರಾಜಸ್ಥಾನ ಹಾಗೂ ಇತರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇದ್ದಾರೆ.

ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ್ದಾರೆ. ಅನೇಕ ಹೋರಾಟದ ಬಳಿಕ ಕಾಟಿಕ್ ಸಮುದಾಯವನ್ನು ಪ್ರವರ್ಗ 1 ರಲ್ಲಿ ಸೇರಿಸಲಾಗಿದೆ ಆದರೆ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕಾಟಿಕ್ ಸಮಾಜದ ಉಪ ಜಾತಿಗಳ ಇರುವಿಕೆಯನ್ನು ಪರಿಶಿಲಿಸಿ ಕುಲಶಾಸ್ತ್ರೀಯ ಅಧ್ಯಾಯನ ನಡೆಸಲು 2011 ರಲ್ಲಿ ಸರ್ಕಾರ ಆದೇಶ ನೀಡಿ ಅನುದಾನ ಒದಗಿಸಿ ಕುವೆಂಪು ವಿಶ್ವಾವಿದ್ಯಾಲಯದ ಪ್ರೊ.ಎಂ. ಗುರುಲಿಂಗಯ್ಯ ಅವರು ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ,ಬೀದರ್, ಶಿವಮೊಗ್ಗ ಮತ್ತಿತರೆಡೆ ಪ್ರವಾಸ ಮಾಡಿ ಸಮುದಾಯದ ಸ್ಥಿತಿಗತಿ ಅಧ್ಯಯನ ಮಾಡಿ 2012 ಸೆಪ್ಟಂಬರ್ 14ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ವರದಿ ಆಧರಿಸಿ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೂಡಲೇ ಸೂರ್ಯವಂಶ ಕ್ಷತ್ರೀಯ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಕುಲಶಾಸ್ತ್ರದೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಮಾಜದ ಅಧ್ಯಕ್ಷ ಸತ್ಯನಾರಾಯಣರಾವ್, ಪ್ರಧಾನ ಕಾರ್ಯದರ್ಶಿ ಶಿವಶಂಕರ ನಿಜಾಮಕಾರಿ, ಶ್ಯಾಮ್ ನಿಜಾಮಕಾರಿ, ಸತ್ಯನಾರಾಯಣ ಕಲ್ಯಾಣಕಾರಿ, ವಿಷ್ಣುರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT