ಮಂಗಳವಾರ, ಆಗಸ್ಟ್ 3, 2021
28 °C
ಶಿರಸ್ತೇದಾರ್, ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ

ರೈತ ಅನುವುಗಾರರ ಸೇವೆ ಮುಂದುವರೆಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಅನುವುಗಾರರನ್ನು ತೆಗೆದು ಹಾಕಿದ್ದು ಸರಿಯಲ್ಲ. ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ರೈತ ಅನುವುಗಾರರ ಸಂಘ ತಾಲ್ಲೂಕು ಘಟಕದಿಂದ ಮಂಗಳವಾರ  ಶಿರಸ್ತೇದಾರ್ ಅಂಬಾದಾಸ್ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ.ಜಯಪ್ರಕಾಶ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕೃಷಿ ಇಲಾಖೆಯಲ್ಲಿ ಬರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಅನುವುಗಾರರನ್ನಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಲಾಗಿದೆ. ಅದೇ ರೀತಿಯಾಗಿ ತಾಂತ್ರಿಕ ಉತ್ತೇಜಕರು ಎಂದು ಕೂಡ ನೇಮಕ ಮಾಡಿಕೊಂಡಿದೆ.

ಆಯ್ಕೆಯ ದಿನದಿಂದ ಭೂ ಚೇತನ ಯೋಜನೆ, ರೈತ ಕ್ಷೇತ್ರ, ಪಾಠ ಶಾಲೆ, ಮಣ್ಣು ಮಾದರಿ ಪರೀಕ್ಷೆ, ಕ್ರಾಪ್ ಸರ್ವೆ ಕೆಲಸ, ಬೆಳೆ ಕಟಾವು ಸಮೀಕ್ಷೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ. ರೈತರ ಮನೆ ಬಾಗಿಲಿಗೆ ಹೋಗಿ ಅವರಿಗೆ ಬೇಕಾಗುವ ಸೌಲಭ್ಯ ಮತ್ತು ಮಾಹಿತಿ ನೀಡುವ ಕೆಲಸ ಮಾಡಲಾಗಿದೆ. ಆದರೀಗ ಏಕಾಏಕಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಅನುವುಗಾರರನ್ನು ಕೆಲಸದಿಂದ ತೆಗೆದು ಹಾಕಿ, ಅವರ ಜಾಗೆಯಲ್ಲಿ ಡಿಪ್ಲೊಮಾ ಪದವಿದರರನ್ನು ‘ರೈತಮಿತ್ರ‘ ಎಂದು ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಸಂಘದ ಸದಸ್ಯ ಶರಣಬಸವ ಮಲ್ಲಾಪುರ ಆಪಾದಿಸಿದರು.

‘ನಾವು ವಿದ್ಯಾವಂತ ನಿರುದ್ಯೋಗಿಗಳಾಗಿದ್ದು, ನಮಗೆ ಮುಂದಿನ ಬದುಕಿನ ಚಿಂತನೆ ಎದುರಾಗಿದೆ.  ಕುಟುಂಬ ನಿರ್ವಹಣೆಗೂ  ತೊಂದರೆ ಉಂಟಾಗಿದೆ.  12 ವರ್ಷಗಳಿಂದ ಕೆಲಸದಲ್ಲಿ ಅನುಭವ ಹೊಂದಿದ್ದು, ನಮ್ಮಗಳನ್ನೇ ಮುಂದುವರಿಸಬೇಕು. ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಸದಸ್ಯರಾದ ರಾಮನಗೌಡ, ಶರಣಬಸವ ಕುನ್ನಟಗಿ, ಶರಣಬಸವ ಗೊರೇಬಾಳ, ಶೇಖರಯ್ಯಸ್ವಾಮಿ ಬಾದರ್ಲಿ, ನಾಗರಾಜ ಜಾಲಿಹಾಳ, ಬಸವರಾಜ ಹುಸೇನಸಾಬ ಗೊರೇಬಾಳ, ದುರುಗಪ್ಪ ಜವಳಗೇರಾ, ಶ್ಯಾಮಸುಂದರ ತುರ್ವಿಹಾಳ, ಮೌನೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು