ದೇವರ ದಾಸಿಮಯ್ಯ ದೇವ ಮಹರ್ಷಿ

ಮಂಗಳವಾರ, ಏಪ್ರಿಲ್ 23, 2019
31 °C
ಜಯಂತಿ ಕಾರ್ಯಕ್ರಮದಲ್ಲಿ ಪಂ. ಜನಾರ್ದನ ಪಾಣಿಭಾತೆ ಹೇಳಿಕೆ

ದೇವರ ದಾಸಿಮಯ್ಯ ದೇವ ಮಹರ್ಷಿ

Published:
Updated:
Prajavani

ರಾಯಚೂರು: ಇತಿಹಾಸ ಎಂಬುದು ಕೊನೆಯ ಪುಟ. ಇಲ್ಲಿ ಯಾರು ಮೊದಲಿಗರಲ್ಲ ಯಾರು ಅಂತ್ಯರಲ್ಲ. ದೇವರ ದಾಸಿಮಯ್ಯ ಅವರು ದೇವರ ಕುಲದಿಂದ ಬಂದಂತಹ ದೇವ ಮಹರ್ಷಿ. ದೇವರ ದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಪಂಡಿತ್‌ ಜನಾರ್ದನ ಪಾಣಿಭಾತೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂತಹ ಮಹರ್ಷಿಗಳು ಲೋಕ ಕಲ್ಯಾಣಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಹುಟ್ಟಿ ಬಂದವರಾಗಿದ್ದಾರೆ. ಪುರಾಣದಲ್ಲಿ ದಾಸಿಮಯ್ಯನವರ ಹಿನ್ನೆಲೆಗೆ ಮಹತ್ವಪೂರ್ಣವಾದ ಇತಿಹಾಸವಿದೆ. ದೇವರ ದಾಸಿಮಯ್ಯ . ತ್ರಿಕಾಲಜ್ಞಾನಿ ಸರ್ವಜ್ಞನಾಗಿ ಅವತಾರ ತಾಳಿದವರಾಗಿದ್ದಾರೆ ಎಂದರು.

ದೇವಾಂಗ ಸಮಾಜದ ಹುಟ್ಟಿಗೆ ದೇವರ ದಾಸಿಮಯ್ಯನರೇ ಮೂಲಕಾರಣ. ಅವರ ಹುಟ್ಟು ಮುಖ್ಯ ಅಲ್ಲ, ಅವರ ಗುಣ ಮುಖ್ಯ. ಚಾಲುಕ್ಯರ ಕಾಲದಲ್ಲಿ ಲಿಂಗ ದೀಕ್ಷೆಯನ್ನು ಪಡೆದ ವ್ಯಕ್ತಿ, ದಾಸಿಮಯ್ಯನವರದು ಪ್ರಮುಖವಾಗಿ ತೆಲುಗು ಸಾಹಿತ್ಯವಾಗಿತ್ತು. ಜೇಡರಹುಳು ಸೃಷ್ಟಿಕರ್ತನ ಸೃಷ್ಟಿಯಲ್ಲಿ ಯಾವ ರೀತಿಯಾಗಿ ಜೇಡಬಲೆಯನ್ನು ಕಟ್ಟುತ್ತದೆಯೋ, ಅದೇ ರೀತಿಯಲ್ಲಿ ದೇವರ ದಾಸಿಮಯ್ಯನವರು ನೇಕಾರ ವೃತ್ತಿಯಲ್ಲಿ ಬಟ್ಟೆಯನ್ನು ಸುತ್ತಿ, ನೇಕಾರಿಕೆಯನ್ನು ಹುಟ್ಟು ಹಾಕಿದರು ಎಂದು ತಿಳಿಸಿದರು.

ಸೃಷ್ಟಿಕರ್ತನ ಮುಂದೆ ವ್ಯಕ್ತಿಗಳ ವ್ಯಕ್ತಿತ್ವ ಏನು ಅಲ್ಲ. ಮೂಲ ವಸ್ತುವನ್ನು ಮಾನವ ಸೃಷ್ಟಿ ಮಾಡಲಾರ. ಅದಕ್ಕಾಗಿ ನಮ್ಮೊಳಗಿನ ಚೈತನ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ವೃತ್ತಿಯನ್ನು ಪಾರಮಾರ್ಥದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗಲು ಸಾಧ್ಯ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ನೇಕಾರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ತಹಸೀಲ್ದಾರ್‌ ಡಾ.ಹಂಪಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕಿ ನೀಲಮ್ಮ, ವಿವಿಧ ಮಠಾಧೀಶರು, ಹಾಗೂ ನೇಕಾರ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !