ಮಸ್ಕಿ: ‘ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಮಟ್ಟ ಸುಧಾರಣೆ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದು, ಎಲ್ಲ ಸೌಲಭ್ಯಗಳನ್ನು ನೀಡಿದರೂ ಫಲಿತಾಂಶ ಕುಸಿಯುತ್ತಿರುವುದು ಆತಂಕದ ವಿಷಯ’ ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಶರಣಬಸವಯ್ಯ ಹಿರೇಮಠ ಅವರಿಗೆ ಪಟ್ಟಣದ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸರ್ಕಾರಿ ಸೇವೆ ಮಾಡುವುದು ಜೀವನದ ಅತ್ತ್ಯತ್ತಮ ಸಾಧನೆ. ಶಿಕ್ಷಕರು ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ. ಶಿಕ್ಷಕರ ಹುದ್ದೆಯಲ್ಲಿ ಶಿಕ್ಷಕರಿಗೆ ಸಿಗುವಂತಹ ಗೌರವ ಬೇರೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಸಿಗುವುದಿಲ್ಲ’ ಎಂದು ಹೇಳಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ‘ವಿದ್ಯೆಯಿಂದಲೇ ನಾವು ಎಲ್ಲವನ್ನೂ ಪಡೆಯಲು ಸಾಧ್ಯವಾಗಿದೆ. ಶಿಕ್ಷಣ ಇಲ್ಲದಿದ್ದರೆ ಇಂದು ನಾವು ಎಲ್ಲಿರುತ್ತಿದ್ದೇವೋ? ಶರಣಬಸವಯ್ಯ ಹಿರೇಮಠ ಅವರು ಕೆಲಸ ಮಾಡಿದ ಎಲ್ಲಾ ಶಾಲೆಗಳು ಇವತ್ತು ಮಾದರಿಯಾಗಿವೆ’ ಎಂದು ಹೇಳಿದರು.

ಸಾಹಿತಿ ಮಹಾಂತೇಶ ಮಸ್ಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತ ಹೂನೂರು, ಬಸಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹೂಗಾರ ಮಾತನಾಡಿದರು.

ಕಿರಣ್ ಮಸ್ಕಿ ಹಾಗೂ ಮೊಹೀತ ಚಕ್ರವರ್ತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಪಾಲ್ಗೊಂಡಿದ್ದರು. ನಂದವಾಡಗಿಯ ಮಹಾಂತಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿದರು.

ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಶಿವಶರಣಪ್ಪ ಇತ್ಲಿ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ರಾಜೇಶ್ವರಿ ಹಿರೇಮಠ, ರಾಜಕುಮಾರ ಹಿರೇಮಠ, ವರಸಿದ್ದಯ್ಯ ಹಿರೇಮಠ, ಚಂದ್ರಶೇಖರ ಹಿರೇಮಠ, ಗೆಳೆಯರ ಬಳಗದ ಎಂ.ಶಿವಶರಣ, ಶರಣಪ್ಪ ಎಲಿಗಾರ, ನಾಗರಾಜ ಶೆಟ್ಟಿ ಹಾಜರಿದ್ದರು.

ಅತಿ ಹೆಚ್ಚು ಅಕ್ಷರ ಕಲಿತವರೇ ಇಂದು ಸಂಸ್ಕೃತಿ ಮರೆತು ಅಕ್ಷರ ರಾಕ್ಷಸರಾಗಿದ್ದಾರೆ. ಇದು ಸಮಾಜಕ್ಕೆ ಮಾರಕ
ಮಹಾಂತಲಿಂಗ ಸ್ವಾಮೀಜಿ ನಂದವಾಡಗಿ-ಅಳಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.