ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಬಿರುಗಾಳಿಗೆ ಬಾಗಿದ ವಿದ್ಯುತ್‌ ಕಂಬಗಳು

Published 27 ಮೇ 2024, 15:10 IST
Last Updated 27 ಮೇ 2024, 15:10 IST
ಅಕ್ಷರ ಗಾತ್ರ

ರಾಯಚೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಭಾರಿ ಬಿರುಗಾಳಿಗೆ ಮರಗಳು ನೆಲಕ್ಕುರುಳಿವೆ.

ಕೆಲವು ಕಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದರೆ, ಕೆಲವಡೆ ಬಾಗಿಕೊಂಡು ವಿದ್ಯುತ್ ತಂತಿ ತುಂಡಾಗಿದೆ.

ಅನೇಕ ಕಡೆ ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೂ ವಿದ್ಯುತ್‌ ಸಂಪರ್ಕ ಕಡಿತಕೊಂಡಿತ್ತು. ಜೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಮರು ಸ್ಥಾಪಿಸಲು ಪ್ರಯಾಸ ಪಡಬೇಕಾಯಿತು.

ವಾಣಿಜ್ಯ ಮಳಿಗೆಗಳು, ಹೋಟೆಲ್‌, ರೆಸ್ಟೋರೆಂಟ್ ಹಾಗೂ ಟಿಫನ್‌ ಸೆಂಟರ್‌ಗಳ ಮಾಲೀಕರು ತೊಂದರೆ ಅನುಭವಿಸಿದರು. ಧಗೆ ಜನರನ್ನು ಬೆಂಬಿಡದಂತೆ ಕಾಡಿತು.

ರೋಡಲಬಂಡಾದಲ್ಲಿ 45.5 ಮಿ.ಮೀ ಮಳೆ
ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾದಲ್ಲಿ 45.5 ಮಿ.ಮೀ ಅಡವಿಹಾಳ 42.5 ಮಿ.ಮೀ ಲಿಂಗಸುಗೂರು 44 ಮಿ.ಮೀ ಉಪ್ಪಾರನಂದಿಹಾಳ 40 ಮಿ.ಮೀ ಗೌಡೂರು 32.5 ಮಿ.ಮೀ ಸಿಂಧನೂರು ತಾಲ್ಲೂಕಿನ ಗುಂಜನಹಳ್ಳಿ 38 ಮಿ.ಮೀ ಉಮಲೂಟಿ 38.5 ಮಿ.ಮೀ ರಾಯಚೂರು ತಾಲ್ಲೂಕಿನ ಯರಗೇರಾ 35.5 ಮಿ.ಮೀ ದೇವದುರ್ಗ ತಾಲ್ಲೂಕಿನ ಗಲಗ 25.1 ಮಿ.ಮೀ ದೇವದುರ್ಗ ಗಬ್ಬೂರು 16 ಮಿ.ಮೀ ಅರಕೇರಾ 9.8 ಮಿ.ಮೀ ಹಾಗೂ ಜಾಲಹಳ್ಳಿಯಲ್ಲಿ 18 ಮಿ.ಮೀ. ಮಳೆಯಾಗಿದೆ. ರಾಯಚೂರು ನಗರದ ಹೊರವಲಯದಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT