ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ‘ವಲಸೆ ಯಾಕ್ರಿ, ನಿಮ್ಮ ಊರಲ್ಲಿಯೆ ಉದ್ಯೋಗ ಖಾತ್ರಿ’ ಅಭಿಯಾನ

ಲಿಂಗತ್ವ ಅಲ್ಪಸಂಖ್ಯಾತರು, ಅಂಗವಿಕಲರಿಗೆ ಆದ್ಯತೆ
ಬಿ.ಎ.ನಂದಿಕೋಲಮಠ
Published 31 ಮಾರ್ಚ್ 2024, 6:18 IST
Last Updated 31 ಮಾರ್ಚ್ 2024, 6:18 IST
ಅಕ್ಷರ ಗಾತ್ರ

ಲಿಂಗಸುಗೂರು: ಬರಗಾಲದ ಕರಿನೆರಳಿಗೆ ತತ್ತರಿಸಿದ ಜನ ಹೆಚ್ಚಿನ ಸಂಖ್ಯೆಯಲ್ಲಿ ನಗರ–ಪಟ್ಟಣಗಳತ್ತ ಗುಳೆ ಹೋಗುತ್ತಿರುವುದನ್ನು ತಡೆಯಲು ‘ವಲಸೆ ಯಾಕ್ರಿ, ನಿಮ್ಮ ಊರಲ್ಲಿಯೇ ಉದ್ಯೋಗ ಖಾತ್ರಿ’ ಕಾರ್ಯಕ್ರಮದಡಿ ಕೆಲಸ ನೀಡಲು ಪೂರ್ವಸಿದ್ಧತೆ ಮಾಡಿಕೊಂಡ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ಮೊಳಗುತ್ತಿವೆ.

2023-24ನೇ ಸಾಲಿನಲ್ಲಿ 16,17,671 ಮಾನವ ದಿನಗಳ ಸೃಷ್ಟಿಸಿ ಕ್ರಿಯಾಯೋಜನೆ ಸಿದ್ಧಪಡಿಸಿತ್ತು. ಡಿಸೆಂಬರ್‌ ಅಂತ್ಯದಲ್ಲಿ ನಿಗದಿತ ಗುರಿ ತಲುಪಲಾಗಿತ್ತು. ಮುಂದುವರೆದು 19,46,953 ಹೆಚ್ಚುವರಿ ಮಾನವ ದಿನ ಸೃಜನೆಯ ಮೂಲಕ ಒಟ್ಟು ₹ 80.68 ಕೋಟಿ ಬಳಸಿಕೊಂಡು ಶೇ 123ರಷ್ಟು ಗುರಿ ಸಾಧನೆ ಮಾಡಿದ್ದನ್ನು ದಾಖಲೆಗಳು ದೃಢಪಡಿಸುತ್ತವೆ.

ಲೋಕಸಭಾ ಚುನಾವಣೆ ಮತದಾನ ಹೆಚ್ಚಳ ಮತ್ತು ಗುಳೆ ನಿಯಂತ್ರಣಕ್ಕಾಗಿ 2024-25ನೇ ಅವಧಿಗೆ ಉದ್ಯೋಗ ಖಾತ್ರಿಯಲ್ಲಿ 16,65,000 ಮಾನವ ದಿನಗಳ ಸೃಷ್ಟಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಏಪ್ರಿಲ್, ಮೇ, ಜೂನ್ ಮೂರು ತಿಂಗಳಲ್ಲಿಯೆ 9,79,176 ಮಾನವ ದಿನಗಳ ಕೆಲಸ ನೀಡಲು ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿವೆ.

‘ಮಣ್ಣು ಮತ್ತು ನೀರು ಸಂರಕ್ಷಣೆ ಆಧರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ದ್ದೇವೆ. ಗರ್ಭಿಣಿಯರು, ಲಿಂಗತ್ವ ಅಲ್ಪಸಂಖ್ಯಾತರು, ಅಂಗವಿಕಲರಿಗೆ ಆದ್ಯತೆ ನೀಡಲಾಗುತ್ತಿದೆ. ಕೆಲಸಕ್ಕೆ ಬರು ವವರ ಮಕ್ಕಳ ಪಾಲನೆಗೆ ಕೂಸಿನ ಮನೆ ಆರಂಭಿಸಿದ್ದೇವೆ’ ಎಂದು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ ತಿಳಿಸಿದರು.

‘ಗುಳೆ ನಿಯಂತ್ರಣ ಮತ್ತು ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಳಕ್ಕೆ ಹಳ್ಳಿ ಹಳ್ಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಏ.1ರಿಂದಲೇ ಉದ್ಯೋಗ ನೀಡಲು ನಿರ್ಧರಿಸಲಾಗಿದೆ. ಕೂಲಿ ಈಗ ₹349ಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಧಿಕಾರಿ ಅಮರೇಶ  ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT