ಬುಧವಾರ, ಅಕ್ಟೋಬರ್ 21, 2020
22 °C

ಮಳೆ ತಂತ್ರಸ್ತರಿಗೆ ಇನ್ಫೋಸಿಸ್‌ನಿಂದ ದಿನಸಿ ಕಿಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಅತಿವೃಷ್ಟಿಯಿಂದ ಹಾನಿ ಅನುಭವಿಸಿರುವ ರಾಯಚೂರು ತಾಲ್ಲೂಕಿನ ಮೂರು ಸಾವಿರ ಕುಟುಂಬಗಳಿಗೆ ಇನ್ಫೋಸಿಸ್‌ ಫೌಂಡೇಷನ್‌ನಿಂದ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

ರೆಡ್‌ಕ್ರಾಸ್‌ ಸಂಸ್ಥೆ, ಸ್ವಾಮಿ ವಿವೇಕಾನಂದ ಆಶ್ರಮ ಸಹಯೋಗದಲ್ಲಿ ಇಡಪನೂರು, ಪಿಡಗಲದಿನ್ನಿ, ತಲಮಾರಿ, ಮಿರ್ಜಾಪೂರ, ಮೀರಾಪೂರ, ಗುಂಜಳ್ಳಿ, ಜಂಬಲದಿನ್ನಿ, ಗೋನವಾರ ಹಾಗೂ ರಾಯಚೂರು ನಗರದ ವಿವಿಧ ಬಡಾವಣೆಯಲ್ಲಿರುವ ಕುಟುಂಬಗಳಿಗೆ ಕಿಟ್‌ಗಳನ್ನು ತಲುಪಿಸಲಾಗುತ್ತಿದೆ ಎಂದು ರಾಮಕೃಷ್ಣ ಆಶ್ರಮ ಜಪಾನಂದ ಸ್ವಾಮಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಲು ಆಹಾರಧಾನ್ಯ, ಬಟ್ಟೆಗಳು, ಪಾತ್ರೆಗಳು, ಹೊದಿಕೆಗಳು, ಮನೆಗೆ ತಾಡಪಾಲ್‌ಗಳನ್ನು ಎರಡು ಲಾರಿಗಳಲ್ಲಿ ತರಲಾಗಿದೆ. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯೂ ಇದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು