ಬುಧವಾರ, ಆಗಸ್ಟ್ 10, 2022
21 °C
ನಾಮಪತ್ರ ಹಿಂಪಡೆಯುವುದಕ್ಕೆ ಕೊನೆದಿನ ಇಂದು

ಎರಡನೇ ಹಂತ: 4,885 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮೂರು ತಾಲ್ಲೂಕುಗಳಲ್ಲಿ ಒಟ್ಟು 4,885 ನಾಮಪತ್ರಗಳು ಸಲ್ಲಿಕೆಯಾಗಿವೆ.

ಲಿಂಗಸುಗೂರು ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ 531 ಸ್ಥಾನಗಳಿಗೆ 1,738 ನಾಮಪತ್ರಗಳು, ಮಸ್ಕಿ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ 404 ಸ್ಥಾನಗಳಿಗೆ 1,045 ನಾಮಪತ್ರಗಳು ಹಾಗೂ ಸಿಂಧನೂರು ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ 626 ಸ್ಥಾನಗಳಿಗೆ 2,102 ನಾಮಪತ್ರಗಳು ಸಲ್ಲಿಕೆಯಾಗಿವೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಪುರುಷರಿಗಿಂತಲೂ ಮಹಿಳಾ ಆಕಾಂಕ್ಷಿಗಳು 900 ಅತಿಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿರುವುದು ಗಮನಾರ್ಹ. ಒಟ್ಟು ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ 2,436 ಮಹಿಳಾ ಆಕಾಂಕ್ಷಿಗಳಿದ್ದಾರೆ. ಮಸ್ಕಿ ತಾಲ್ಲೂಕಿನಲ್ಲಿ 520 ಹಾಗೂ ಸಿಂಧನೂರು ತಾಲ್ಲೂಕಿನಲ್ಲಿ 1,016 ಮಹಿಳಾ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಿರುವ ಸ್ಥಾನಗಳು ಸೇರಿದಂತೆ ಅನ್ಯ ಸ್ಥಾನಗಳಲ್ಲೂ ಒಟ್ಟು 1,145 (ಶೇ 23) ರಷ್ಟು ಪರಿಶಿಷ್ಟ ಜಾತಿಯವರು ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷವಾಗಿ ಪುರುಷರಿಗಿಂತಲೂ ಮಹಿಳೆಯರು 640 ಅತಿಹೆಚ್ಚಿನ ಸಂಖ್ಯೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡ ಸಮಯದಾಯದವರು ಒಟ್ಟು 865 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರೆ, ಅದರಲ್ಲಿ ಮಹಿಳೆಯರು 512 ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಿಂದುಳಿದ ವರ್ಗದವರು ಒಟ್ಟು 528 ಆಕಾಕ್ಷಿಗಳು ನಾಮಪತ್ರ ಸಲ್ಲಿಸಿದ್ದು, ಮಹಿಳೆಯರು 315 ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾಮಾನ್ಯ ಸ್ಥಾನಗಳಿಗೆ 2,347 ಅತಿಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಪುರುಷರು 1,373 ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಸಾಮಾನ್ಯರ ಸ್ಥಾನಗಳಿಗಿಂತಲೂ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ಮೀಸಲು ಸ್ಥಾನಗಳಿಗೆ 944 ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ. ಮಸ್ಕಿ ತಾಲ್ಲೂಕಿನಲ್ಲಿ ಕೂಡಾ ಮೀಸಲು ಸ್ಥಾನಗಳಿಗಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ, ಸಿಂಧನೂರು ತಾಲ್ಲೂಕಿನಲ್ಲಿ ಮಾತ್ರ ಸಾಮಾನ್ಯ ಸ್ಥಾನಗಳಿಗೆ ಒಟ್ಟು 1,066 ಅತಿಹೆಚ್ಚು ನಾಮಪತ್ರಗಳು ಬಂದಿವೆ.

ನಾಮಪತ್ರಗಳ ಪರಿಶೀಲನೆ ಆರಂಭವಾಗಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಡಿಸೆಂಬರ್‌ 18 ಕೊನೆಯ ದಿನವಾಗಿದೆ. ಅಧಿಕೃತ ನಾಮಪತ್ರಗಳ ಪಟ್ಟಿ ಕೂಡಾ ಕೊನೆಯ ದಿನದಂದು ಪ್ರಕಟವಾಗಲಿದ್ದು, 19 ರಿಂದ ಚುನಾವಣೆ ಪ್ರಚಾರ ಗರಿಗೆದರಲಿದೆ. ಡಿಸೆಂಬರ್‌ 27 ರಂದು ಮತದಾನ ನಡೆಯುವುದು.

ಈಗಾಗಲೇ ರಾಯಚೂರು, ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲ್ಲೂಕುಗಳಲ್ಲಿ ಒಂದನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಪ್ರಚಾರವು ಅಬ್ಬರದಿಂದ ನಡೆಯುತ್ತಿದೆ. ಡಿಸೆಂಬರ್‌ 22 ರಂದು ಮತದಾನ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು