ಹಟ್ಟಿ ಚಿನ್ನದ ಗಣಿ: ಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ನಡಟ್ಟಿರುವ ತೆಂಗಿನ ಸಸಿಗಳು ಒಣಗುತ್ತಿವೆ. ₹5 ಸಾವಿರ ವೆಚ್ಚದಲ್ಲಿ 35ಕ್ಕೂ ಅಧಿಕ ಸಸಿಗಳನ್ನು ಠಾಣೆಯ ಕಾಂಪೌರ್ ಸುತ್ತ ನೆಡಲಾಗಿದೆ. ಅಧಿಕಾರಿಗಳಿಗೆ ಸಸಿ ನೆಡುವಾಗ ಇದ್ದ ಪರಿಸರ ಪ್ರೇಮ ಈಗ ಇಲ್ಲವಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಅಸಮಾಧಾನ.

ತೆಂಗಿನ ಸಸಿಗಳಿಗೆ ಯಾವುದೇ ಇಲ್ಲದ್ದರಿಂದ ಕುರಿ, ಮೇಕೆ, ಆಕಳುಗಳು ಎಲೆಗಳನ್ನು ತಿನ್ನುತ್ತಿವೆ. ಸಿಬ್ಬಂದಿ ಕಣ್ಣಿದ್ದು ಕುರುಡರಂತೆ ಇದ್ದಾರೆ ಎನ್ನುತ್ತಾರೆ ಇಲ್ಲಿನ ಜನ.

‘ಸಸಿ ರಕ್ಷಣೆ, ನಿರ್ವಹಣೆಗೆ ನೀರು ಹಾಗೂ ತಂತಿಯ ಜಾಲರಿ ಒದಗಿಸಿಕೊಡಿ ಎಂದು ಗಣಿ ಕಂಪನಿ ಅಧಿಕಾರಿಗಳಿಗೆ ಪತ್ರ ಬರೆದರೂ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ’ ಎಂದು ಇಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು.

ಠಾಣೆಯ ಕಾಂಪೌಡ್ನಲ್ಲಿ ಈ ಹಿಂದೆ ಗಣಿ ಕಂಪನಿ ವತಿಯಿಂದ ನೀರಿನ ನಳದ ವ್ಯವಸ್ಥೆ ಮಾಡಗಿದ್ದು ನೀರೂ ಸತತವಾಗಿ ಬರುತ್ತವೆ. ಇಲ್ಲಿಂದಲೇ ಜನ ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಾರೆ. ಆದರೂ ಅಧಿಕಾರಿಗಳು ಕೆಸರೆರಚಾಟ ಮಾಡುತ್ತಾ ಕಾಲಹರಣ ಮಾಡುತ್ತಾ ತೆಂಗಿನ ಸಸಿ ಒಣಗಳು ಕಾರಣರಾಗಿದ್ದಾರೆ. ಪೊಲೀಸ್ ಠಾಣೆಯ ಅಂದ ಹೆಚ್ಚಿಸಲು ಹಣ ಖರ್ಚು ಸಸಿಗಳನ್ನು ನೆಟ್ಟರೂ ನಿರ್ವಹಣೆ ಇಲ್ಲದೆ ಒಣಗುತ್ತಿವೆ. ನೀರಿನಲ್ಲಿ ಹೋಮ ಮಾಡಿದಂತಾಗಿದೆ’ ಎನ್ನುವುದು ಜನ ದೂರು.

ತೆಂಗಿನ ಸಸಿಗಳು ಒಣಗದಂತೆ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು
ಹೊಸಕೇರಪ್ಪ ಪಿಐ ಹಟ್ಟಿ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.