ಸೋಮವಾರ, ಏಪ್ರಿಲ್ 19, 2021
25 °C

ರಾಯಚೂರು: ಅಕ್ಕಿ ಗಿರಣಿಗಳ ಮೇಲೆ ದಾಳಿ, ಭಾರೀ ಪ್ರಮಾಣದ ಪಡಿತರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಕೃಷ್ಣಸ್ವಾಮಿ ರೈಸ್‌ ಮಿಲ್‌, ಜಿ.ಶಂಕರ್‌ ಇಂಡಸ್ಟ್ರೀಸ್‌, ಚಂದ್ರಿಕಾ ರೈಸ್‌ಮಿಲ್‌ ಹಾಗೂ ನರಸಿಂಹ್‌ ರೈಸ್‌ ಮಿಲ್‌ಗಳ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.

50 ಕೆಜಿ ತೂಕದ 884 ಅಕ್ಕಿಚೀಲಗಳು ಪತ್ತೆಯಾಗಿವೆ. ಒಟ್ಟು ₹6 ಲಕ್ಷ ಮೌಲ್ಯದ ಅಕ್ಕಿ. ಕಡಿಮೆ ಹಣದಲ್ಲಿ ಅಕ್ಕಿ ಪಡೆದು, ಬ್ರ್ಯಾಂಡ್‌ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ದಾಸ್ತಾನು ಮಾಡಲಾಗಿತ್ತು ಎಂದು ತಿಳಿಸಲಾಗಿದೆ.

ರಾಯಚೂರು ಗ್ರಾಮೀಣ ಠಾಣೆ ಹಾಗೂ ಮಾರ್ಕೆಟ್‌ ಯಾರ್ಡ್‌ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು