ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಧಾರಾಕಾರ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತೊಗರಿ, ಹತ್ತಿ, ಹೆಸರು, ಸೂರ್ಯಕಾಂತಿ, ಸಜ್ಜೆ ಬಿತ್ತನೆ ಮಾಡಿದ ರೈತರು ಕಳೆದ ಒಂದು ತಿಂಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಆಗಾಗ ಅಲ್ಪಸ್ವಲ್ಪ ಮಳೆಯಾದರೂ ಭೂಮಿ ಹಸಿಯಾಗಿರಲಿಲ್ಲ. ಎರಡು ದಿನಗಳಿಂದ ಸುರಿದ ರಭಸದ ಮಳೆಗೆ ಸಂಪೂರ್ಣ ಭೂಮಿ ಹಸಿಯಾಗಿದ್ದು, ರೈತರಿಗೆ ನೆಮ್ಮದಿ ತಂದಿದೆ.

‘ಬೆಳೆ ನಡುವೆ ಬೆಳೆದಿದ್ದ ಕಳೆ ತೆಗೆದು ಚಿಕ್ಕ ಕುಂಟೆ ಹೊಡೆದು ಭೂಮಿಯನ್ನು ಹಸನುಗೊಳಿಸಲಾಗಿತ್ತು. ಸ್ವಲ್ಪ ತಡವಾದರೂ ರಭಸದ ಮಳೆಯಿಂದ ಜಮೀನುಗಳು ಹಸಿಯಾಗಿವೆ. ಒಣಗುವ ಹಂತದಲ್ಲಿದ್ದ ಬೆಳೆಗಳು ಜೀವಕಳೆ ಪಡೆದಿವೆ’ ಎಂದು ರೈತರಾದ ಚನ್ನಪ್ಪ, ಮುದಕಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.