ಮುದಗಲ್: ಹೈದರಾಬಾದ್-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಪಟ್ಟಣದ ನಿರುಪಾಧೀಶ್ವರ ಪೆಟ್ರೋಲ್ ಬಂಕ್ ಎದುರು ಬಿದ್ದಿದ್ದ ಗುಂಡಿಗಳನ್ನು ಸಾರ್ವಜನಿಕರು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೆದ್ದಾರಿಯ ಗುಂಡಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದರೆ ಗುಂಡಿಗೆ ನೀರು ನಿಲ್ಲುವುದರಿಂದ ಸಾಕಷ್ಟು ಅವಘಡ ಸಂಭವಿಸಿವೆ. ಬಾರಿ ವಾಹನಗಳು ಗುಂಡಿಗೆ ಸಿಲುಕಿಕೊಂಡಾಗ ಚಾಲಕರು ಕಷ್ಟ ಪಟ್ಟಿದ್ದಾರೆ. ರಸ್ತೆ ದುರಸ್ತಿ ಮಾಡಿ ಕೊಡಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ರಸ್ತೆ ಬದಿಗೆ ಇದ್ದ ಅಂಗಡಿಕಾರರು, ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ನಾಗರಿಕರ ಸಹಕಾರದಿಂದ ಜೆಲ್ಲಿಕಲ್ಲು, ಸಿಮೆಂಟ್, ಮರಳು ಮಿಶ್ರಣದಿಂದ ಗುಂಡಿ ಮುಚ್ಚಿ ಸುಲಭ ಸಂಚಾರಕ್ಕೆ ಅನುವು ಮಾಡಿದರು.

ಈ ವೇಳೆ ಶಿವುಕುಮಾರ ಪಾಟೀಲ, ಎಲ್.ಟಿ. ನಾಯಕ, ಶಂಕರಗೌಡ ಕಿಡದೂರು, ಜೋಸೆಫ್ ಇರ್ಲಾ, ಈರಣ್ಣ ಕಳ್ಳಿಮನಿ, ವೈದ್ಯ ಅಮರಗುಂಡಪ್ಪ ಗುಡಿಹಾಳ, ಆರೋಗ್ಯ ಇರ್ಲಾ, ಹಸನ ಪಂಚರ್ ಅಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.