ಗುರುವಾರ , ಜೂನ್ 30, 2022
21 °C

ಗ್ರಾಮೀಣ ಪ್ರದೇಶದಲ್ಲಿ ಸೋಂಕು ನಿಯಂತ್ರಣ: ಮನೆ ಮನೆ ಸಮೀಕ್ಷೆ: 5 ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕಿನಾದ್ಯಂತ 44 ಆರೋಗ್ಯ ಉಪ ಕೇಂದ್ರಗಳ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮಾರ್ಚ್‌ 31 ರಿಂದ ಜೂನ್‍ 4ರ ವರೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ. ಕೇವಲ 5 ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಜನರ ಆತಂಕ ದೂರ ಮಾಡಿದೆ.

44 ಸಮೀಕ್ಷಾ ತಂಡಗಳಲ್ಲಿ 308 ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. 76170 ಕುಟುಂಬಗಳನ್ನು ಸಂಪರ್ಕಿಸಿದ ಕಾರ್ಯಕರ್ತರು 398833 ಜನರನ್ನು ವಿಚಾರಣೆ ನಡೆಸಿದ್ದಾರೆ.

ಜ್ವರ ತಲೆನೋವು ಲಕ್ಷಣವುಳ್ಳವರು 173, ಬೇಧಿ ಇತರೆ ಲಕ್ಷಣಗಳಿರುವ 52, ಅಸ್ತಮಾ, ನಿಮೋನಿಯಾ ಇತರೆ ಲಕ್ಷಣಗಳುಳ್ಳವರು 661, ತೀವ್ರ ಉಸಿರಾಟದಿಂದ ಬಳಲುವವರು 87 ಜನ ಪತ್ತೆಯಾಗಿದ್ದಾರೆ.

ಅಂತಿಮವಾಗಿ 1332 ಲಕ್ಷಣಗಳುಳ್ಳವರನ್ನು 680 ಆರ್‌ಎಟಿ ಮತ್ತು 677 ಆರ್‌ಟಿಪಿಸಿಆರ್ ಮಾಡಲಾಗಿದೆ. ಈ ಪೈಕಿ ಐವರಿಗೆ ಸೋಂಕು ದೃಢಪಟ್ಟಿದೆ. ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಉಳಿದಂತೆ 662 ಜನರಿಗೆ ಮೆಡಿಷನ್‍ ಕಿಟ್‍ ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ ಮಾತನಾಡಿ, ‘ಮನೆ ಮನೆಗೆ ತೆರಳಿ ಇಲಾಖೆಯ 44 ತಂಡಗಳ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಸಮೀಕ್ಷೆ ನಡೆಸಲಾಗಿದೆ. ಕೇವಲ 5 ಪ್ರಕರಣಗಳು ವರದಿ ಆಗಿದ್ದು, ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ’ ಎಂದು ಹೇಳಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.