ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್ | ವಿವಿಧೆಡೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

Published : 17 ಸೆಪ್ಟೆಂಬರ್ 2024, 15:43 IST
Last Updated : 17 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಮುದಗಲ್: ಪಟ್ಟಣದ ಪುರಸಭೆ, ಕಂದಾಯ ಭವನ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಸರ್ದಾರ್‌ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುರಸಭೆಯಲ್ಲಿ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ಗುತ್ತೇದಾರ, ಕಂದಾಯ ಭವನದಲ್ಲಿ ಉಪ ತಹಶೀಲ್ದಾರ್ ತುಳಜಾ ರಾಮ ಸಿಂಗ್, ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ ಎಂ, ಕೃಷಿ ಅಧಿಕಾರಿ ಮಹಾಂತಯ್ಯ, ಪ್ರಾಂಶುಪಾಲ ಸಿದ್ದರಾಮ ಪಾಟೀಲ, ಕಿಲ್ಲಾ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ಡಿ.ರಫಿ ಖಾಜಿ ಧ್ವಜಾರೋಹಣ ನೆರವೇರಿಸಿದರು.

ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್, ಕರಿಯಪ್ಪ ಯಾದವ್, ಗುಂಡಪ್ಪ ಗಂಗಾವತಿ, ತಮ್ಮಣ್ಣ ಗುತ್ತಿಗೆದಾರ, ನಾಗರಾಜ ತಳವಾರ, ಶಂಕಪ್ಪ ಜೀಡಿ, ಸತೀಶ್ ಭೋವಿ, ಮೈಬುಸಾಬ ಬಾರಿಗಿಡ, ಹುಸೇನ್ ಅಲಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT