‘ಭಾಷಾಭಿಮಾನ ಬೆಳೆಸಿಕೊಳ್ಳಿ’

ತುರ್ವಿಹಾಳ: ‘ಕನ್ನಡ ನಾಡು–ನುಡಿಯ ಕುರಿತು ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಭಾಷೆ ಹಾಗೂ ಸಂಸ್ಕೃತಿ ಉಳಿಸಲು ಸಾಧ್ಯ’ ಎಂದು ಶಂಕ್ರಗೌಡ ಯುವಕ ಸಂಘದ ಅಧ್ಯಕ್ಷ ಮಲ್ಲಯ್ಯ ಭಂಗಿ ಅಭಿಪ್ರಾಯಪಟ್ಟರು.
ಪಟ್ಟಣದ ಡಿ.ಶಂಕ್ರಗೌಡ ಯುವಕ ಮಂಡಳಿ ಭವನದ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಬೇಕು. ಕೃಷಿ ಅಭಿವೃದ್ಧಿಗೆ ಒತ್ತು ನೀಡಬೇಕು. ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದರು.
ಆರಂಭದಲ್ಲಿ ಮಾದಯ್ಯಗುರುವಿನ ಹಾಗೂ ಅಮರಗುಂಡಯ್ಯ ತಾತನವರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಗುತ್ತೇದಾರ, ಶೇಖರಗೌಡ ದೇವರಮನಿ, ಬಾಪುಗೌಡ ದೇವರಮನಿ, ಮಲ್ಲಪ್ಪ ಮಡಿವಾಳ, ಮುನಿಯಪ್ಪ ಬೆಳ್ಳಿ, ಮರಿಸ್ವಾಮಿ ಹತ್ತಿಗುಡ್ಡ, ಅನ್ವರ್ ಪಾಷಾ, ಅಮರೇಶ ಗುಡೂರು, ವೀರೇಶ ನವಲಹಳ್ಳಿ, ಶಂಕ್ರಗೌಡ, ಶುಕಮುನಿ, ರಾಜು, ಶರಣಪ್ಪ ಬೇರ್ಗಿ ಹಾಗೂ ದಯಾನಂದ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.