ಸಹಕಾರ ಸಂಘಗಳ ನಿಬಂಧಕರಿಗೆ ದೂರು
ಅನಂತಪುರ ಜಿಲ್ಲೆಯ ಅನಂತಪುರ ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ಕುಣೆ ಬಾಲರಾಜು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರಿಗೆ ದೂರು ಕೊಟ್ಟಿದ್ದಾರೆ. ಕರ್ನಾಟಕ ಗಡಿಭಾಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಅಧ್ಯಕ್ಷರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಬೇಕು. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸ್ವಂತ ಪ್ರಚಾರ ಲಾಭಕ್ಕಾಗಿ ಸಮ್ಮೇಳನ ಆಯೋಜಿಸಿದ್ದಾರೆ ಎಂದು ದೂರಿದ್ದಾರೆ.