ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ ಹುಣ್ಣಿಮೆ: ಸಿಂಗ್ರಾಣಿ ಕಲ್ಲು, ಮರಳಿನ ಭಾರ ಎತ್ತುವ ಸ್ಪರ್ಧೆ

Published 22 ಜೂನ್ 2024, 14:09 IST
Last Updated 22 ಜೂನ್ 2024, 14:09 IST
ಅಕ್ಷರ ಗಾತ್ರ

ತುರ್ವಿಹಾಳ: ಪಟ್ಟಣದ ಯುವ ಘರ್ಜನೆ ವತಿಯಿಂದ ಕಾರ ಹುಣ್ಣಿಮೆ ಪ್ರಯುಕ್ತ ಶನಿವಾರ ಸಿಂಗ್ರಾಣಿಕಲ್ಲು ಹಾಗೂ ಮರಳಿನ ಭಾರ ಎತ್ತುವ ಸ್ಪರ್ಧೆಗೆ ಮಾದಯ್ಯ ಗುರುವಿನ್ ಚಾಲನೆ ನೀಡಿದರು.

ನಂತರ ಮಾತನಾಡಿ ಅವರು, ‘ಆಧುನಿಕ ಯುಗದ ಭರಾಟೆಯಿಂದಾಗಿ ಹಿಂದಿನ ಕಾಲದ ಗ್ರಾಮೀಣ ಕ್ರೀಡೆ ನಶಿಸಿ ಹೋಗುತ್ತಿವೆ. ಈಗಿನ ಕಾಲದ ವೇಟ್ ಲಿಫ್ಟಿಂಗ್​ ಹಿಂದಿನ ಕಾಲದಲ್ಲಿಯೂ ಇತ್ತು. ಅದನ್ನು ಸಂಗ್ರಾಣಿ ಕಲ್ಲು ಎತ್ತುವ ಕ್ರೀಡೆ ಎಂದೇ ಕರೆಯುತ್ತಿದ್ದರು. ಇಂತಹ ಸಾಹಸ ಪ್ರದರ್ಶನಗಳು ಗ್ರಾಮೀಣ ಭಾಗದಲ್ಲಿ ಇನ್ನೂ ಇರುವುದು ಸಂತಸದ ವಿಷಯವಾಗಿದೆ. ಗ್ರಾಮೀಣ ಕ್ರೀಡೆಗಳು ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುತ್ತವೆ’ ಎಂದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.

ತುರ್ವಿಹಾಳ ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಸಿಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು
ತುರ್ವಿಹಾಳ ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಸಿಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು

ಮಲ್ಲನಗೌಡ ದೇವರಮನಿ, ಎಂ.ಡಿ.ಫಾರೂಖ್ ಸಾಬ್ ಖಾಜಿ, ಮೌಲಪ್ಪಯ್ಯ ಗುತ್ತೇದಾರ, ಶಾಮೀದಸಾಬ್ ಚೌದ್ರಿ, ದೊಡ್ಡಪ್ಪ ಕಲ್ಲುಡಿ, ನಾಗಪ್ಪ ಸಂದೂರಿ, ಯಲ್ಲಪ್ಪ ಭೋವಿ, ಪಕೀರಪ್ಪ ಭಂಗಿ, ಮಹಾಂತೇಶ ಸಜ್ಜನ,
ರಾಮಣ್ಣ ಉಪ್ಪಾರ, ರಮೇಶ ಕರಡೋಣಿ, ಮುತ್ತಣ್ಣ ನವಲಿ, ಡಿ.ಶಂಕರಗೌಡ ದೇವರಮನಿ, ಅಯೋಜಕರಾದ ಮಲ್ಲು ಭಂಗಿ, ವೀರೇಶ, ಮಾರುತಿ, ಘರ್ಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT