ಸೋಮವಾರ, ಅಕ್ಟೋಬರ್ 26, 2020
27 °C

ಕೆರೆ ಮಣ್ಣಿನಿಂದ ಫಲವತ್ತತೆ ಹೆಚ್ಚಳ: ಜಿಲ್ಲಾಧಿಕಾರಿ ಶರತ್‌ ಬಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೆರೆಯ ಹೂಳನ್ನು ರೈತರು ತಮ್ಮ ಜಮೀನಿಗೆ ಸಾಗಿಸಿಕೊಂಡಲ್ಲಿ ಜಮೀನಿನ ಫಲವತ್ತತೆ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ಜಿಲ್ಲಾಡಳಿತ ಹಾಗೂ ಭಾರತೀಯ ಜೈನ ಸಂಘ (ಜಿಜೆಎಸ್)ದಿಂದ ತಾಲ್ಲೂಕಿನ ಕಟ್ಲಟಕೂರ್ ಗ್ರಾಮದಲ್ಲಿ ಆರಂಭಿಸಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.

ರೈತರು ಅಗತ್ಯ ಪ್ರಮಾಣದ ಹೂಳನ್ನು ತಮ್ಮ ಜಮೀನಿಗೆ ಕೊಂಡೊಯ್ಯಬೇಕು. ಕೆರೆಯ ಅಂಚನ್ನು ಮತ್ತಷ್ಟು ಭದ್ರ ಪಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.

ಬಿದ್ದ ಮಳೆ ನೀರು ಕೆರೆಗೆ ಹರಿದು ಬರಲು ಅನುಕೂಲವಾಗುವಂತೆ ಕಾಲುವೆಗಳನ್ನು ಮತ್ತಷ್ಟು ಅಗಲ ಮಾಡುವಂತೆ ಸೂಚಿಸಿದರು.

236.48 ಎಕರೆ ವ್ಯಾಪ್ತಿಯಲ್ಲಿರುವ ಕಟ್ಲಟ್‌ಕೂರ್ ಕೆರೆಯಲ್ಲಿ ಹೂಳು ತುಂಬಿತ್ತು. ಹೂಳು ತೆಗೆಯುವ ಮುನ್ನ ಕೆರೆ ಅಂಗಳದಲ್ಲಿ ಬೆಳೆದಿದ್ದ ಪೊಟರೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಇದುವರೆಗೆ 2.75 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ಹೊರ ತೆಗೆದು ರೈತರ ಜಮೀನುಗಳಿಗೆ ಸಾಗಿಸಲಾಗಿದೆ. ಪ್ರತಿದಿನ 4 ಹಿಟಾಚಿ ಹಾಗೂ 3 ಜೆಸಿಬಿ ಯಂತ್ರಗಳನ್ನು ಬಳಸಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ತಾಂತ್ರಿಕ ತಂಡದಿಂದ ಕೆರೆ ಸಮೀಕ್ಷೆ ಕೈಗೊಂಡ ನಂತರ ಕೆರೆಯ ಆವರಣ, ಕೆರೆಯ ಸಮತಟ್ಟು ಇನ್ನಿತರೆ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ನಲಿನ್ ಅತುಲ್ ಕೂಡಾ ಹೂಳು ಹೊರತೆಗೆಯುವ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ರೈತರು ಸ್ವಯಂ ಪ್ರೇರಿತರಾಗಿ ಟ್ರಾಕ್ಟರ್‌ಗಳ ಮೂಲಕ ತಮ್ಮ ಜಮೀನುಗಳಿಗೆ ಸಾಗಿಸುತ್ತಿರುವ ದೃಶ್ಯ ಕಂಡು ಬಂತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ಸಹಾಯಕ ನಿರ್ದೇಶಕ ಸಂದೀಪ್, ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಘಟನಾಧಿಕಾರಿ ಕಮಲ್ ಕುಮಾರ್, ಅಜಿತ್ ರಾಜ್ ಸಂಚಿತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು