ಹಟ್ಟಿ ಚಿನ್ನದ ಗಣಿ: ಗೌಡೂರು ಗ್ರಾಮದ ಜನರಿಗೆ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ.

ಗೌಡೂರು ಗ್ರಾಮದಲ್ಲಿ ಎಎನ್ಎಂ ಆರೋಗ್ಯ ಕೇಂದ್ರವಿಲ್ಲದ ಕಾರಣ ಜನ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಧಿತಿ ಇದೆ.

ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನ ಕಾಯಿಲೆ ಬಿದ್ದರೆ, ದೂರದ ಊರುಗಳಿಗೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.

ಗೌಡೂರು ಹಾಗೂ ಮಾಚನೂರು ತಾಂಡಾ, ತವಗ, ರೋಡಲಬಂಡ, ಹಡಗಲಿ ತಾಂಡಾ ಸೇರಿದಂತೆ ಸುತ್ತಲಿನ 8 ರಿಂದ 10 ಹಳ್ಳಿಗಳಿಗೆ ಆರೋಗ್ಯ ಕೇಂದ್ರವಿಲ್ಲದಿರುವುದು ವಿಪರ್ಯಾಸದ ಸಂಗತಿ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಸಂಚಾರಿ ಚಿಕಿತ್ಸಾಲಯವೇ ಇವರಿಗೆ ಆಧಾರವಾಗಿದೆ.

ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. ಎಎನ್ಎಂ ಕೇಂದ್ರ ಆರಂಭಿಸಲು ಬೇಕಾದ ಅರ್ಹತೆಗಳೂ ಇವೆ. ಆದರೂ ಆರಂಭವಾಗಿಲ್ಲ. ಗ್ರಾ.ಪಂ ಹಾಗೂ ತಾ.ಪಂ. ಸದಸ್ಯರು ಗಮನಹರಿಸುತ್ತಿಲ್ಲ. ಅಧಿಕಾರಿಗಳೂ ಸಹ ಇತ್ತ ಬರುವುದಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

ಈ ಹಿಂದೆ ಗೌಡೂರು ಗ್ರಾಮಕ್ಕೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ₹35 ಲಕ್ಷ ಬಿಡುಗಡೆ ಮಾಡಲಾಗಿತ್ತು. ಸ್ಧಳದ ಕೊರತೆಯಿಂದ ಅದನ್ನು ಕೈ ಬಿಡಲಾಯಿತು. ಆದರೆ ಈಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಧಳವಕಾಶ ಇದ್ದು, ಆರೋಗ್ಯ ಕೇಂದ್ರ ಸ್ಧಾಪನೆಗೆ ಆರೋಗ್ಯ ಇಲಾಖೆ ಮುಂದಾಗಬೇಕಾಗಿದೆ. ಈ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.