ಮಾನ್ವಿ: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ತತ್ವಾದರ್ಶಗಳ ಪಾಲನೆ ಅಗತ್ಯ’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಗುರುವಾರ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಪುರಸಭೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಆಚರಣೆ ಹಾಗೂ ಸರ್ವ ಧರ್ಮಗಳ ಪ್ರಾರ್ಥನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೇಂಟ್ ಮೇರಿಸ್ ಚರ್ಚ್ನ ಫಾದರ್.ಲ ಸುರೇಶ ವಿನ್ಸೆಂಟ್, ಮುಸ್ಲಿಂ ಸಮುದಾಯದ ಧರ್ಮಗುರು ಸೈಯದ್ ಸಜ್ಜಾದ್ ಹುಸೇನಿ ಮತವಾಲೆ ಸೌಹಾರ್ಧದ ಸಂದೇಶ ನೀಡಿದರು. ಉಪನ್ಯಾಸಕ ಮೆಹಬೂಬ್ ಮದ್ಲಾಪುರ, ರೇವಣಸಿದ್ದಯ್ಯ ಸ್ವಾಮಿ ಹಾಗೂ ಹುಸೇನಪ್ಪ ಸರ್ವ ಧರ್ಮಗಳ ಧಾರ್ಮಿಕ ಶ್ಲೋಕಗಳ ಪಠಣೆ ಹಾಗೂ ಪ್ರಾರ್ಥನೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಗಣ್ಯರು ಪಂಪಾ ಉದ್ಯಾನದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್, ಪುರಸಭೆಯ ಅಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರನಾಯಕ,ಲಕ್ಷ್ಮೀ ದೇವಿ ನಾಯಕ, ಶರಣಪ್ಪಗೌಡ, ಶರಣಪ್ಪ ಮೇದಾ, ಬಾಷಾ ಸಾಬ್, ಸೈಯದ್ ಖಾಲೀದ್ ಖಾದ್ರಿ, ರಾಜಾ ಸುಭಾಷಚಂದ್ರ ನಾಯಕ, ಪುರಸಭೆ ಅರೋಗ್ಯ ನಿರೀಕ್ಷಕ ಮಹೇಶಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.