ಮಂಗಳವಾರ, ಮೇ 11, 2021
28 °C

ಮಸ್ಕಿ ಕ್ಷೇತ್ರದಲ್ಲಿ 7 ಜನ ಕೋವಿಡ್ ಸೋಂಕಿತರು: 6ರ ನಂತರ ಮತದಾನಕ್ಕೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್

ಮಸ್ಕಿ (ರಾಯಚೂರು): ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 7 ಜನ ಕೋವಿಡ್ ಸೋಂಕಿತರಿದ್ದು, ಸಂಜೆ 6ರ ನಂತರ ಮತದಾನ ಮಾಡಲು ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಮತಗಟ್ಟೆ‌ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಣಕು ಮತದಾನದ ವೇಳೆ ಐದು ಕಡೆಗಳಲ್ಲಿ ಮತಯಂತ್ರ, ವಿವಿಪ್ಯಾಟ್ ಗಳಲ್ಲಿ ದೋಷ ಕಾಣಿಸಿತ್ತು. ಕೂಡಲೇ ಮತಯಂತ್ರ ಹಾಗೂ ವಿವಿ ಪ್ಯಾಟ್ ಬದಲಿಸಿದ ನಂತರ ಮತದಾನ ಆರಂಭಿಸಲಾಗಿದೆ. ಎಲ್ಲಿಯೂ ಅಹಿತಕರ ಘಟನೆ ಇಲ್ಲ ಎಂದರು.

Live–ಉಪ‌ಚುನಾವಣೆ: ಬೆಳಗಾವಿಯಲ್ಲಿ ಮತದಾನ ನೀರಸ, ಮಸ್ಕಿಯಲ್ಲಿ ಶೇ 11.23 ಮತದಾನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು