ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ವಿವಿಧ ಕಾಮಗಾರಿಗೆ ಶಾಸಕ ಬಸನಗೌಡ ತುರುವಿಹಾಳ ಚಾಲನೆ

Published : 13 ಸೆಪ್ಟೆಂಬರ್ 2024, 14:24 IST
Last Updated : 13 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಮಸ್ಕಿ: ‘ಕ್ಷೇತ್ರದ 12 ಗ್ರಾಮಗಳಲ್ಲಿ ಶಾಲಾ ಕಟ್ಟಡ, ರಸ್ತೆಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನೀಡಲಾದ ₹6 ಕೋಟಿ ವೆಚ್ಚದ ಕಾಮಗಾರಿ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಹೇಳಿದರು.

ತಾಲ್ಲೂಕಿನ ಹೂವಿನಭಾವಿ, ಅಂಕುಶದೊಡ್ಡಿ ಮುಂತಾದ ಗ್ರಾಮಗಳಲ್ಲಿ ಶುಕ್ರವಾರ ಶಾಲಾ ಕೊಠಡಿ, ಸಿಸಿ ರಸ್ತೆ, ಬಿಸಿಯೂಟ ಕೊಠಡಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ ಹೂವಿನಭಾವಿ, ಅಂಕುಶದೊಡ್ಡಿ, ಸಂತೆಕೆಲ್ಲೂರು, ತಿಮ್ಮಾಪೂರ, ದಿಗ್ಗನಾಯಕಭಾವಿ, ಬುದ್ದಿನ್ನಿ ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿ ಬೇಡರ ಕಾರಲಕುಂಟಿ, ಮಸ್ಲಿಕಾರಲಕುಂಟಿ, ಗೋನವಾರ, ಕಡದರಾಳ, ಮಾಲದಿನ್ನಿ, ಮಾರಲದಿನ್ನಿ ತಾಂಡಾದಲ್ಲಿ, ಉಸ್ಕಿಹಾಳ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.

‘ಒಳ ಚರಂಡಿ, ಬಿಸಿಯೂಟದ ಕೊಠಡಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಎಲ್ಲಾ ಕಾಮಗಾರಿಗಳಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆಗಿದ್ದು ಶೀಘ್ರ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಮುಖಂಡ ಮಲ್ಲಿಕಾರ್ಜುನ ಪಾಟೀಲ, ನಿರುಪಾದೆಪ್ಪ ವಕೀಲ, ಆದನಗೌಡ ದಳಪತಿ ಸಂತೆಕೆಲ್ಲೂರು ಸೇರಿದಂತೆ ವಿವಿಧ ಗ್ರಾಮಗಳು ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜನಿಯರ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT