ಸೋಮವಾರ, ಏಪ್ರಿಲ್ 6, 2020
19 °C

ಪುತ್ರನ ಕರೆತರಲು ಹೊರಟಿದ್ದ ತಾಯಿ ಅಪಘಾತದಲ್ಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ (ರಾಯಚೂರು): ಕೊಡಗು ಜಿಲ್ಲೆ ಕುಶಾಲನಗರದ ಸೈನಿಕ ಶಾಲೆ ರಜೆ ಘೋಷಿಸಿದ್ದರಿಂದ ಅಲ್ಲಿದ್ದ ಮಕ್ಕಳನ್ನು ಕರೆತರಲು ಜಿಲ್ಲೆಯಿಂದ ಹೊರಟಿದ್ದ ಐದು ವಿದ್ಯಾರ್ಥಿಗಳ ಪಾಲಕರಿದ್ದ ಕ್ರೂಸರ್‌ ಮತ್ತು ಲಾರಿ ನಡುವೆ ಚಿತ್ರದುರ್ಗದ ಮೊಳಕಾಲ್ಮೂರು ಬಳಿ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಬ್ಬರು ಮಹಿಳೆ ಹಾಗೂ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉದ್ಭಾಳ ಗ್ರಾಮದ ಸಾವಿತ್ರಮ್ಮ ಗೌಡರ (34) ಹಾಗೂ ಮುದಗಲ್‌ ಪಟ್ಟಣದ ಚಾಲಕ ಮಹಾಂತೇಶ (35) ಮೃತರು. ಅಪಘಾತದಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಗಾಯಗೊಂಡಿದ್ದಾರೆ. ಪುತ್ರನನ್ನು ಕರೆತರಲು ಹೊರಟಿದ್ದ ತಾಯಿ ಮೃತಪಟ್ಟ ಸುದ್ದಿ ತಿಳಿದು ಉದ್ಭಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು