ಮುದಗಲ್: ಪಟ್ಟಣ ಸಮೀಪದ ಸುಕ್ಷೇತ್ರ ಅಂಕಲಗಿ ಮಠದಲ್ಲಿ (ತಲೆಕಟ್ಟ ಗ್ರಾಮ) ವನಸಿರಿ ಫೌಂಡೇಷನ್ ಹಾಗೂ ಮುದಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕದಿಂದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಅಭಿಯಾನ ಗುರುವಾರ ಜರುಗಿತು.

ಪಕೀರೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಸ್ವಾಮೀಜಿ, ‘ಪರಿಸರ ನಾಶದಿಂದ ಜೀವ ಸಂಕುಲ ಸಂಕಷ್ಟಗಳಿಗೆ ತುತ್ತಾಗುತ್ತಿದೆ. ಮನುಷ್ಯನ ಜೀವನಮಟ್ಟ ಸುಧಾರಿಸಲು ಪ್ರಕೃತಿ ಸಂರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಬಳಿಕ ತಲೆಕಟ್ಟ ಗ್ರಾಮದ ಶಾಲೆಯ ಆವರಣದಲ್ಲಿ 200 ಸಸಿಗಳನ್ನು ನಾಟಿ ಮಾಡಲಾಯಿತು.

ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಮುದಗಲ್ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸಿದ್ದರಾಮ ಪಾಟೀಲ, ಪ್ರಸಾದ್ ಶಿವರಾಮನಗರ ಕ್ಯಾಂಪ್, ನಿರುಪಾದಿ ಸಾಸಲಮರಿ, ಉಪನ್ಯಾಸಕಿ ಸಿದ್ದಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.