ಶುಕ್ರವಾರ, ಮೇ 14, 2021
21 °C

ಕೋವಿಡ್‌ನಿಂದ ಚೇತರಿಸಿಕೊಂಡ 97 ವರ್ಷದ ಅಜ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್‌ ದೃಢಪಟ್ಟಿದ್ದರಿಂದ ಒಂದು ವಾರದ ಹಿಂದೆ ನಗರದ ಬಸವ ಆಸ್ಪತ್ರೆಗೆ ದಾಖಲಾಗಿದ್ದ 97 ವರ್ಷದ ಸಜನಿಬಾಯಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.

‘ಮನೆಯಲ್ಲಿ ಇವರೊಬ್ಬರಿಗೇ ಕೋವಿಡ್‌ ದೃಢಪಟ್ಟಿತ್ತು. ಈ ಇಳಿವಯಸ್ಸಿನಲ್ಲೂ ಉತ್ತಮ ರೋಗನಿರೋಧಕ ಶಕ್ತಿ ಹೊಂದುವ ಮೂಲಕ ಕೋವಿಡ್‌ ಜಯಸಿ ಬಂದಿರುವುದು ಇತರ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದಂತಾಗಿದೆ’ ಎಂದು ಆಸ್ಪತ್ರೆ ವೈದ್ಯ ಡಾ.ಬಸವರಾಜ ಪಾಟೀಲ ತಿಳಿಸಿದರು.

‘ಏ.20 ರಂದು ಆಸ್ಪತ್ರೆಗೆ ದಾಖಲಾ ಗಿದ್ದರು. ವಯೋ ಸಹಜ ರೋಗ ಲಕ್ಷಣಗಳಿದ್ದವು. ಜ್ವರ, ಕೆಮ್ಮು ಹಾಗೂ ಆಯಾಸ ಇತ್ತು. ಮೂರು ದಿನ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಯಿತು. ಅನಂತರ ಹೊರ ರೋಗಿಯಾದರು. ಎಲ್ಲ ರೀತಿಯ ಚಿಕಿತ್ಸೆಗೂ ಸ್ಪಂದಿಸಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.