ಜಾಲಹಳ್ಳಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಕಾದು ಹೈರಾಣ ಆಗಿ ಹೋದರು.

ಅಧಿಕಾರಿಗಳ ತಂಡ ಸಂಜೆ 5 ಗಂಟೆಗೆ ಗ್ರಾ.ಪಂ ಕಚೇರಿ ಮುಂದೆಯೇ ಹಾದು ಹೋದರು ಗ್ರಾ.ಪಂ ಕಚೇರಿಗೆ ಬೇಟಿ ನೀಡಿಲ್ಲ ಪರಿಶೀಲನೆ ಮಾಡಿಲ್ಲ.

ಪಟ್ಟಣದ 8 ಮತ್ತು 9ನೇ ವಾರ್ಡ್ಗಳಲ್ಲಿ ಕಳೆದ ಎರಡು ವರ್ಷಗಳಿಂದ ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆಯಾಗುತ್ತಿದೆ. ಸಮಸ್ಯೆ ಪರಿಹರಿಸುವಂತೆ ಜನ ನಿತ್ಯ ಸದಸ್ಯರ ಮನೆಗೆ ಬರುತ್ತಾರೆ. ಅನೇಕ ಸಲ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ಬಗ್ಗೆ ತಂದರೂ ಪ್ರಯೋಜನವಾಗಿಲ್ಲ. ಅದ್ದರಿಂದ ಜಿಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಸಮಸ್ಯೆ ಹೇಳಬೇಕು ಎಂದು ಕಾದು ಕುಳಿತರು ಸೌಜನ್ಯಕ್ಕೂ ವಾಹನ ನಿಲ್ಲಿಸಿ ಸಮಸ್ಯೆ ಕೇಳದೆ ದೇವದುರ್ಗ ನಗರಕ್ಕೆ ಹೊರಟು ಹೋದರು.

‘ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿ ಜನರ ಸಮಸ್ಯೆ ಕೇಳಿಸಿಕೊಳ್ಳುವಷ್ಟು ಸೌಜನ್ಯ ಇಲ್ಲವಾದರೆ ಪ್ರವಾಸದ ನಾಟಕ ಯಾಕೆ ಮಾಡಬೇಕು?. ಈ ಅಧಿಕಾರಿ ಧೋರಣೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕಳಿಸಲಾಗಿದೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಅಯ್ಯಪ್ಪ ಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.