ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು | ಕಾಲುವೆಗೆ ನೀರು ಹರಿಸಲು ಆಗ್ರಹ: ಧರಣಿ

Published 2 ನವೆಂಬರ್ 2023, 14:24 IST
Last Updated 2 ನವೆಂಬರ್ 2023, 14:24 IST
ಅಕ್ಷರ ಗಾತ್ರ

ಸಿಂಧನೂರು: ‘ತಾಲ್ಲೂಕಿನ ತುಂಗಭದ್ರಾ ಜಲಾಶಯದ ಎಡದಂಡೆ ವ್ಯಾಪ್ತಿಯ 40ನೇ ವಿತರಣಾ ಕಾಲುವೆಯ ಕೆಳಭಾಗದಲ್ಲಿ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ತಕ್ಷಣ ನೀರು ಪೂರೈಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

‘ರೈತರು ನಿರಂತರವಾಗಿ ನೀರಿಗಾಗಿ ತಹಶೀಲ್ದಾರ್ ಕಚೇರಿ ಮತ್ತು ನೀರಾವರಿ ಇಲಾಖೆಗೆ ಅಲೆದಾಡಿದರೂ ನೀರು ಹರಿಸಿಲ್ಲ. ನ.3 ರಿಂದ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ’ ಎಂದು ಕಿಸಾನ್ ಸಭಾ ಸಂಚಾಲಕ ವೆಂಕನಗೌಡ ಗದ್ರಟಗಿ ತಿಳಿಸಿದರು.

ಕಿಸಾನ್‍ ಸಭಾ ಸಹಸಂಚಾಲಕ ಬಾಬರ್ ಪಟೇಲ್, ಮುಖಂಡರಾದ ಶಾಂತಯ್ಯಸ್ವಾಮಿ, ಸಣ್ಣ ಈರಪ್ಪ ಪೂಜಾರ್, ಹೊಳೆಯಪ್ಪ, ಹೊನ್ನೂರು ಅಲಿ, ಮೌಲಾಸಾಬ, ನಿಂಗಪ್ಪ ಗಾಳಿ, ಚಾಂದ್ ಪಟೇಲ್, ಯಲ್ಲಪ್ಪ ಕಲ್ಲೂರು, ಬುಡ್ಡಾಸಾಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT