ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ರೈತರಿಗಾಗಿ ಕ್ಯೂಆರ್‌ ಕೋಡ್‌ ಸಿದ್ಧಪಡಿಸಿದ ಕೃಷಿ ವಿವಿ

ಬೆಳೆ ನಿರ್ವಹಣೆ, ರೋಗ ನಿಯಂತ್ರಣಕ್ಕೆ ಕ್ಯೂಆರ್‌ಕೋಡ್‌ ಮೂಲಕ ವಿವರಣೆ
Published : 23 ಸೆಪ್ಟೆಂಬರ್ 2024, 6:01 IST
Last Updated : 23 ಸೆಪ್ಟೆಂಬರ್ 2024, 6:01 IST
ಫಾಲೋ ಮಾಡಿ
Comments

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ರೇಷ್ಮೆ ಕೃಷಿ ಘಟಕವು ರೇಷ್ಮೆ ಬೆಳೆಗಾರರು ಸುಲಭವಾಗಿ ಹೊಸ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದುಕೊಳ್ಳುವಂತಾಗಲು ಕ್ಯೂಆರ್‌ಕೋಡ್‌ ಅಭಿವೃದ್ಧಿ ಪಡಿಸಿದೆ.

ರೇಷ್ಮೆ ಹುಳುವಿನ ಜೀವನ ಚಕ್ರ, ಅವುಗಳ ಸೋಂಕು ರೋಗ, ಬ್ಯಾಕ್ಟೇರಿಯಾದಿಂದ ಬರುವ ರೋಗ, ಬೂದಿರೋಗ ಹಾಗೂ ಚುಕ್ಕೆ ರೋಗಗಳ ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ಯೂಆರ್‌ಕೋಡ್‌ ಸಿದ್ಧಪಡಿಸಿ ಮಾಹಿತಿ ನೀಡುತ್ತಿದೆ.

ರೈತರು ಹೊಲಗಳಲ್ಲಿ ಬೆಳೆದ ಬೆಳೆಯಲ್ಲಿ ಕಂಡುಬರುವ ರೋಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿದ್ಯಾರ್ಥಿಗಳೇ ಸಿದ್ಧಪಡಿಸಿರುವ ಕ್ಯೂಆರ್‌ಕೋಡ್‌ ಮೇಲೆ ಕ್ಲಿಕ್ಕಿಸಿದರೆ ಸಾಕು ರೈತನಿಗೆ ಆ ವಿಷಯಕ್ಕೆ ಸಂಬಂಧಪಟ್ಟಂತೆ ಸಮಗ್ರವಾದ ಮಾಹಿತಿ ತೆರೆದುಕೊಳ್ಳಲಿದೆ.

ರೇಷ್ಮೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಕೆ.ಹಾದಿಮನಿ ಮಾರ್ಗದರ್ಶನದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ. ವಿಶ್ವವಿದ್ಯಾಲಯವು ಇಂತಹ ಚಟುವಟಿಕೆಗಳಿಗೆ ಅಂಕವನ್ನೂ ನಿಗದಿಪಡಿಸಿರುವ ಕಾರಣ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಅವುಗಳನ್ನು ಸಿದ್ಧಪಡಿಸಿದ್ದಾರೆ.

‘ಒಟ್ಟು 12 ವಿಷಯಗಳಿಗೆ ಸಂಬಂಧಪಟ್ಟಂತೆ ಕ್ಯೂಆರ್ ಕೋಡ್‌ ಸಿದ್ಧಪಡಿಸಲಾಗಿದೆ. ಈ ಮೂಲಕ ರೈತರಿಗೆ ಮಾಹಿತಿ ಒದಗಿಸಲು ಪ್ರಯತ್ನಿಸಲಾಗಿದೆ. ಪ್ರಸ್ತುತ ರೈತರು ಸಹ ಸ್ಮಾರ್ಟ್‌ಫೋನ್ ಬಳಸಲು ಆರಂಭಿಸುರುವ ಕಾರಣ ಅವರಿಗೆ ಹೆಚ್ಚು ಉಪಯುಕ್ತವಾಗಲಿದೆ’ ಎಂದು ಕೃಷಿ ವಿಜ್ಙಾನಗಳ ವಿಶ್ವವಿದ್ಯಾಲಯದ ರೇಷ್ಮೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಕೆ.ಹಾದಿಮನಿ ಹೇಳುತ್ತಾರೆ.

‘ಕಲಿಕೆಯ ಹಂತದಲ್ಲೇ ಪ್ರಾತ್ಯಕ್ಷಿಕೆಯ ವಿಡಿಯೊ ಮಾಡಿ ಕಡಿಮೆ ಅವಧಿಯಲ್ಲಿ ಉಪಯುಕ್ತ ಮಾಹಿತಿ ಕೊಡುವ ಪ್ರಯತ್ನವಾಗಿದೆ. ಪ್ರಾಧ್ಯಾಪಕರು ನಮಗೆ ಕೊಟ್ಟ ವಿಷಯ ಆಧರಿಸಿ ವಿಡಿಯೊ ಮಾಡಿಕೊಂಡು ಬೆಳೆ ನಿರ್ವಹಣೆ, ರೋಗ ಪೀಡೆ ನಿವಾರಣೆ ಮಾಹಿತಿ ಹಂಚಿಕೊಂಡಿದ್ದೇವೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

‘ಕೃಷಿ ವಿಶ್ವವಿದ್ಯಾಲಯವು ಸಿದ್ಧಪಡಿಸಿದ ಕ್ಯೂಆರ್‌ಕೋಡ್‌ನಿಂದ ರೇಷ್ಮೆಹುಳಗಳ ನಿರ್ವಹಣೆ ಹಾಗೂ ಅವುಗಳಿಗೆ ಬರುವ ರೋಗಗಳನ್ನು ತಡೆಯಲು ತ್ವರಿತವಾಗಿ ಕ್ರಮ ವಹಿಸಲು ಸಾಧ್ಯವಾಗಿದೆ. ರೇಷ್ಮೆ ಬೆಳೆಗಾರರಿಗೆ ಬೇಕಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ಒದಗಿಸಿ ಅನುಕೂಲ ಮಾಡಿಕೊಡಲಾಗಿದೆ’ ಎಂದು ಕಲಬುರಗಿ ಜಿಲ್ಲೆಯ ಜೀವರ್ಗಿ ಕಲ್ಲಹಂಗರಗಾ ಪ್ರಗತಿಪರ ರೈತ ಪರಶುರಾಮ ಬೊಮ್ಮನಳ್ಳಿ ಹೇಳಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ರೇಷ್ಮೆ ಕೃಷಿ ಘಟಕವು ಸಿದ್ಧಪಡಿಸಿದ ಕ್ಯೂಆರ್‌ ಕೋಡ್‌ಗಳು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ರೇಷ್ಮೆ ಕೃಷಿ ಘಟಕವು ಸಿದ್ಧಪಡಿಸಿದ ಕ್ಯೂಆರ್‌ ಕೋಡ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT