ರಾಯಚೂರು: ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ನಿರ್ದೇಶನದಂತೆ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಗಣೇಶ ವಿಸರ್ಜನೆ ಮಾಡುವ ಖಾಸಬಾವಿಯಲ್ಲಿ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.

60 ಅಡಿ ಆಳದಲ್ಲಿನ ಹೂಳು ತೆಗೆಯಬಹುದಾದ ಯಂತ್ರಹೊಂದಿದ ಹಿಟಾಚಿಯಿಂದ ಬಾವಿ ಸ್ವಚ್ಛಗೊಳಿಸಲಾಯಿತು.

ಆಯುಕ್ತ ಜುಬಿನ್ ಅವರು, ಕೆಲ ಕಡೆ ಭೇಟಿ ನೀಡಿ ಯಂತ್ರಗಳಿಂದ ನಡೆದ ಶುಚಿತ್ವ ಕಾರ್ಯವನ್ನು ಖುದ್ದು ಪರಿಶೀಲಿಸಿದರು. ನಗರದ ಎಲ್ಲ ಜಲ ಮೂಲಗಳನ್ನು ಸಂರಕ್ಷಿಸಬೇಕು. ಕೆರೆ, ಕಟ್ಟೆ, ಬಾವಿ, ಗಟಾರಗಳನ್ನು ಪ್ಲಾಸ್ಟಿಕ್ ಮತ್ತು ಹೂಳು ಮುಕ್ತವಾಗಿಸಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ ಎಂದರು.

ನಗರದ ಸೌಂದರ್ಯೀಕರಣಕ್ಕೆ ಮಹಾನಗರಪಾಲಿಕೆ ಎಲ್ಲ ಬಗೆಯ ಪ್ರಯತ್ನ ಮುಂದುವರಿಸಿದೆ. ಪಾಲಿಕೆಯ ಎಂಜಿನಿಯರ್ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತಿನಿಂದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಉಪ ಆಯುಕ್ತೆ ಸಂತೋಷ ರಾಣಿ ಹಾಗೂ ಇನ್ನೀತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.