ರಾಯಚೂರು: ‘ಪ್ರೇಮ ಮತ್ತು ಮೃತ್ಯು ಗ್ರಂಥದಲ್ಲಿ ಪ್ರೇಮವು ಮೃತ್ಯುವಿನೊಂದಿಗೆ ಹೋರಾಡಿ ಸಾವನ್ನು ಗೆಲ್ಲುತ್ತದೆ. ಮೃತ್ಯು ಪ್ರೇಮಿಗಳ ದೇಹವನ್ನು ಸುಡುತ್ತದೆ. ಪ್ರೀತಿಯನ್ನಲ್ಲ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಬಸವರಾಜ ಡೋಣೂರು ಹೇಳಿದರು.

ನಗರದಲ್ಲಿ ಅರವಿಂದ ಸೊಸೈಟಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಡಾ.ಬಿ.ಆರ್.ಭೀಡ್ ರಚಿತ ‘ಸಾವಿತ್ರಿ’ ಹಾಗೂ ಕಿಶೋರಕುಮಾರ ಕಾಸಾದ ರಚಿತ ‘ಶ್ರೀಅರವಿಂದರ ಪ್ರೇಮ ಮತ್ತು ಮೃತ್ಯು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಾವೊಂದು ಪತ್ನಿಗೆ ಕಚ್ಚಿದ್ದರಿಂದ ಸಾವನ್ನಪ್ಪುತ್ತಾಳೆ. ಪತಿಯು ಪತ್ನಿಯ ಜೀವಕ್ಕಾಗಿ ಯಮನೊಂದಿಗೆ ಹೋರಾಡುತ್ತಾನೆ. ಇದು ಇವರಿಬ್ಬರ ನಡುವಿನ ಪ್ರೇಮ ಮತ್ತು ಮೃತ್ಯು ಗ್ರಂಥ ರಚಿಸಿದ್ದಾರೆ. ಪ್ರೇಮ ಶಾಶ್ವತ ಆದರೆ ಪ್ರೇಮಿಗಳಲ್ಲ. ಸಾವು ಇರುವುದು ದೇಹಕ್ಕೆ ಹೊರತು ಪ್ರೇಮಕ್ಕೆ ಅಲ್ಲ. ಚೈತನ್ಯ, ಅರಿವು, ಬೆಳಕು ಇವಕ್ಕೆ ಸಾವಿಲ್ಲ. ದೇಹದ ಸಾವು, ಸಾವಲ್ಲ. ಇದು ಅವರ ತಿಳಿವಳಿಕೆಯಾಗಿತ್ತು’ ಎಂದರು.

ಅರವಿಂದ ಸಾವಿತ್ರಿ ಹೊತ್ತಿಗೆ-2 ಸಂಪುಟ–1 ಸಂಗ್ರಹ 1 ರಿಂದ 5 ವರೆಗಿನ ಕಿಶೋರಕುಮಾರ ಅವರ ಅರವಿಂದ ಪ್ರೇಮ ಮತ್ತು ಮೃತ್ಯು ಕನ್ನಡ ಅನುವಾದ ಪುಸ್ತಕಗಳನ್ನು ಸಾಕ್ಷಿ ಟ್ರಸ್ಟ್ ವ್ಯವಸ್ಥಾಪಕ ಆರ್.ವಿ.ಜಹಗೀರದಾರ್ ಬಿಡುಗಡೆ ಮಾಡಿದರು.

ಜಿಗಣಿಯ ಎಸ್.ವ್ಯಾಸ ವಿಶ್ವವಿದ್ಯಾಲಯದ ಯೋಗಗುರು ಕರಿಬಸಪ್ಪ, ಬಸನಗೌಡ ಪಾಟೀಲ, ರಾಮರೆಡ್ಡಿ, ಅರವಿಂದ ಸೊಸೈಟಿ ರಾಜ್ಯ ಸಮಿತಿ ಅಧ್ಯಕ್ಷ ಡಾ.ಅಜೀತ್ ಸಬ್ನಿಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.