ರಾಯಚೂರು: ಜಿಲ್ಲೆಯ ಮಾನ್ವಿ, ಲಿಂಗಸುಗೂರು ಹಾಗೂ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾಷ್ತ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನ ಶಾಂತಿಯುತವಾಗಿ ನೆರವೇರಿತು.

ಮಾನ್ವಿಯಲ್ಲಿ ಡಿ.ಎಸ್.ಪಿ, ಇಬ್ಬರು ಸಿ.ಪಿ.ಐ, ಐವರು ಸಬ್ ಇನ್ಸ್ಪೆಕ್ಟರ್ಗಳು, 75 ಮಂದಿ ಪೊಲೀಸ್ ಕಾನ್ಸ್ಟೆಬಲ್ ಹಾಗೂ 15 ಮಂದಿ ಹೋಮ್ಗಾರ್ಡ್ಗಳು ಕರ್ತವ್ಯ ನಿರ್ವಹಿಸಿದರು. ಜೊತೆಗೆ ಒಂದು ಡಿ.ಎ.ಆರ್. ತುಕಡಿಯನ್ನೂ ನಿಯೋಜಿಸಲಾಗಿತ್ತು. ಲಿಂಗಸುಗೂರಿನಲ್ಲಿ ಒಬ್ಬ ಅಡಿಷನಲ್ ಎಸ್ಪಿ, ಒಬ್ಬ ಡಿ.ಎಸ್.ಪಿ, ನಾಲ್ವರು ಸಿ.ಪಿ.ಐಗಳು, ಆರು ಸಬ್ ಇನ್ಸ್ಪೆಕ್ಟರ್ಗಳು, 45 ಮಂದಿ ಪೊಲೀಸ್ ಕಾನ್ಸ್ಟೆಬಲ್ ಹಾಗೂ 15 ಮಂದಿ ಹೋಮ್ಗಾರ್ಡ್ಗಳು ಕಾರ್ಯನಿರ್ವಹಿಸಿದರು. ಎರಡು ಡಿ.ಎ.ಆರ್. ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಶಕ್ತಿನಗರದಲ್ಲಿ ಒಬ್ಬ ಪಿ.ಎಸ್.ಐ ಮತ್ತು 15 ಮಂದಿ ಪೊಲೀಸ್ ಕಾನ್ಸ್ಟೆಬಲ್ ಬಂದೋಬಸ್ತ್ನಲ್ಲಿ ತೊಡಗಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. ‘ಆರ್ಎಸ್ಎಸ್ ಪಥಸಂಚಲನವು ಶಾಂತಿಯುತವಾಗಿ ನಡೆದಿದೆ. ಎಲ್ಲೆಡೆ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ‘ ಎಂದು ಹೇಳಿದರು.